ಕರ್ನಾಟಕದಲ್ಲಿ 30 ಸಾವಿರ ಉದ್ಯೋಗ – ರಾಹುಲ್‌ ಗಾಂಧಿ, ಅಶ್ವಿನಿ ವೈಷ್ಣವ್‌ ಮಧ್ಯೆ ಕ್ರೆಡಿಟ್‌ ವಾರ್‌

2 Min Read

ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್‌ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಮಧ್ಯೆ ಕರ್ನಾಟಕದಲ್ಲಿ (Karnataka) ಉದ್ಯೋಗ ಸೃಷ್ಟಿ ವಿಚಾರದಲ್ಲಿ ಕ್ರೆಡಿಟ್‌ ವಾರ್‌ ನಡೆದಿದೆ.

ಕರ್ನಾಟಕದಲ್ಲಿ ಘಟಕ ತೆರೆದ 8-9 ತಿಂಗಳಲ್ಲಿ 30 ಸಾವಿರ ಮಂದಿಗೆ ತೈವಾನ್‌ (Taiwan) ಮೂಲದ ಫಾಕ್ಸ್‌ಕಾನ್‌ (Foxconn) ಕಂಪನಿ ಉದ್ಯೋಗ ನೀಡಿದ ಸುದ್ದಿಯನ್ನು ಹಂಚಿಕೊಂಡ ರಾಹುಲ್‌ ಗಾಂಧಿ ಇದು ಕರ್ನಾಟಕ ಮಾದರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು.

ಈ ಪೋಸ್ಟ್‌ಗೆ ಅಶ್ವಿನಿ ವೈಷ್ಣವ್‌ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಯಶಸ್ಸನ್ನು ಒಪ್ಪಿಕೊಂಡಿದ್ದಕ್ಕಾಗಿ ರಾಹುಲ್‌ ಗಾಂಧಿ ಅವರಿಗೆ ಧನ್ಯವಾದಗಳು. ನೀವು ಗಮನಿಸಿದಂತೆ ನಮ್ಮ ಪ್ರಧಾನಿಯವರ ದೃಷ್ಟಿಕೋನವನ್ನು ನಾವು ಕಾರ್ಯಗತಗೊಳಿಸುತ್ತಿದ್ದಂತೆ ನಾವು ಉತ್ಪಾದಕ ಆರ್ಥಿಕತೆಯಾಗುತ್ತಿದ್ದೇವೆ ಬರೆದು ಟಾಂಗ್‌ ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವಂತೆ ಪಕ್ಷದಲ್ಲಿ ಒತ್ತಡ ಇದೆ: ಪ್ರಿಯಾಂಕಾ ಪರ ವಾದ್ರಾ ಸ್ಫೋಟಕ ಹೇಳಿಕೆ

ಚರ್ಚೆ ಯಾಕೆ?
ರಾಹುಲ್‌ ಗಾಂಧಿ ಕಳೆದ ವಾರ ಜರ್ಮನಿ ಪ್ರವಾಸದಲ್ಲಿದ್ದರು. ಈ ವೇಳೆ ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯ ಕುಸಿಯುತ್ತಿದೆ ಎಂದು ಹೇಳಿಕೆ ನೀಡಿದ್ದು ದೊಡ್ಡ ಚರ್ಚೆಯಾಗಿತ್ತು.

ಮ್ಯೂನಿಕ್‌ನಲ್ಲಿರುವ ಬಿಎಂಡಬ್ಲ್ಯೂ ಘಟಕಕ್ಕೆ ಭೇಟಿ ನೀಡಿದ ಬಳಿಕ ರಾಹುಲ್ ಗಾಂಧಿಯವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಉತ್ಪಾದನೆಯು ಬಲವಾದ ಆರ್ಥಿಕತೆಯ ಬೆನ್ನೆಲುಬಾಗಿದೆ. ದುಃಖಕರ ವಿಚಾರವೆಂದರೆ ಭಾರತದಲ್ಲಿ ಉತ್ಪಾದನೆ ಕುಸಿಯುತ್ತಿದೆ. ದೊಡ್ಡ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಲು ಭಾರತಕ್ಕೆ ಉತ್ತಮ ಉತ್ಪಾದನಾ ವಾತಾವರಣದ ಅಗತ್ಯವಿದೆ. ಪ್ರಸ್ತುತ ಭಾರತದಲ್ಲಿ ಉತ್ಪಾದನಾ ವಲಯವು ನಿರೀಕ್ಷಿತ ವೇಗದಲ್ಲಿ ಬೆಳೆಯುತ್ತಿಲ್ಲ. ಇದು ಯುವಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ತಡೆಯುತ್ತಿದೆ ಎಂದು ಅವರು ಹೇಳಿದ್ದರು.

ರಾಹುಲ್‌ ಹೇಳಿಯ ನಂತರ ಬಿಜೆಪಿ ನಾಯಕರು ಮೇಕ್‌ ಇನ್‌ ಯೋಜನೆಯ ಸಾಧನೆಗಳ ವಿವರವನ್ನು ಪೋಸ್ಟ್‌ ಮಾಡಿ ತಿರುಗೇಟು ನೀಡಿದ್ದರು. ಈ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ರಾಹುಲ್‌ ಗಾಂಧಿ ಕರ್ನಾಟಕದ ಫಾಕ್ಸ್‌ಕಾನ್‌ ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಯನ್ನು ಪ್ರಕಟಿಸಿ ಕಾಂಗ್ರೆಸ್‌ ಸರ್ಕಾರದ ಸಾಧನೆ ಎಂದು ಬಣ್ಣಿಸಿದ್ದರು. ರಾಹುಲ್‌ ಪ್ರಶಂಸೆಯನ್ನೇ ಸಾಲುಗಳನ್ನು ಅಶ್ವಿನಿ ವೈಷ್ಣವ್‌ ಈಗ ತೆಗೆದುಕೊಂಡು ಇದು ನಮ್ಮ ಸರ್ಕಾರದ ಸಾಧನೆ ಎಂದು ಬಿಂಬಿಸಿದ್ದಾರೆ.

Share This Article