ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

Public TV
2 Min Read

ಹಿಂದಿ ಬಿಗ್ ಬಾಸ್ (Bigg Boss OTT)  ಮನೆಯಲ್ಲಿ ಏನು ಆಗಬಾರದು ಎಂದು ಪದೇ ಪದೇ ಸಲ್ಮಾನ್ ಖಾನ್ ಹೇಳುತ್ತಿದ್ದರೋ ಅದೇ ಆಗಿದೆ. ಇಬ್ಬರು ಸ್ಪರ್ಧಿಗಳ ಮುತ್ತಿನಾಟಕ್ಕೆ ಪ್ರೇಕ್ಷಕರು ತಲೆತಿರುಗಿ ಬಿದ್ದಿದ್ದಾರೆ. ಬಿಗ್ ಬಾಸ್ ಇದೊಂದು ಫ್ಯಾಮಿಲಿ ಶೋ. ದಯವಿಟ್ಟು ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಸಾಕಷ್ಟು ಬಾರಿ ಸಲ್ಮಾನ್ ಖಾನ್ ನಿರೂಪಣಾ ವೇಳೆಯಲ್ಲಿ ಹೇಳಿದ್ದಾರೆ. ಆದರೆ, ನಿನ್ನೆ ನಡೆದ ಘಟನೆಗೆ ಅನೇಕ ಪ್ರೇಕ್ಷಕರು ಛೀಮಾರಿ ಹಾಕಿದ್ದಾರೆ.

ನಿನ್ನೆ ಬಿಗ್ ಬಾಸ್ ಮನೆ ಸಖತ್ ಬಿಸಿ ಬಿಸಿಯಾಗಿತ್ತು. ಒಂದು ಕಡೆ ಆಕಾಂಕ್ಷಾ (Akanksha)  ಮತ್ತು ಜದ್ (Jad) ಏಕಾಂತದಲ್ಲಿ ಕೂತಿದ್ದರು. ಮತ್ತೊಂದು ಕಡೆ ಪೂಜಾ ಭಟ್ (Pooja Bhatt) ತಮ್ಮದೇ ಧ್ಯಾನದಲ್ಲಿ ಮಗ್ನರಾಗಿದ್ದರು. ಒಂದು ರೀತಿಯಲ್ಲಿ ಬಿಗ್ ಬಾಸ್ ಮನೆ ಪಡ್ಡೆಗಳು ರೊಮ್ಯಾಂಟಿಕ್ ಪಾರ್ಕ್ ಆಗಿತ್ತು. ಇಂತಹ ಸಮಯದಲ್ಲಿ ಸಚ್ ದೇವ್ ಸುಮ್ಮನಿರದೇ ‘ಆಕಾಂಕ್ಷ ಅವರು ಜಿದ್‍ ಗೆ ಕಿಸ್ ಮಾಡಬೇಕು’ ಎಂದು ಸವಾಲು ಎಸೆದೇ ಬಿಟ್ಟರು.

ಸಚ್ ದೇವ್ (Sach Dev) ಇಂಥದ್ದೊಂದು ಬೇಡಿಕೆ ಇಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆಕಾಂಕ್ಷ ಮತ್ತು ಜದ್ ಗೆ ಇದು ಅನಿರೀಕ್ಷಿತವೂ ಅಲ್ಲ. ಏಕೆಂದರೆ ಅವರಿಬ್ಬರ ಮಧ್ಯ ಏನೋ ನಡೆಯುತ್ತಿದೆ ಎನ್ನುವಂತೆ ಸಾಕಷ್ಟು ಭಾರೀ ಅವರೇ ತೋರಿಸಿಕೊಂಡಿದ್ದಾರೆ. ಹಾಗಾಗಿ ಆಕಾಂಕ್ಷ ಮತ್ತು ಜಿದ್ ಅದನ್ನು ಮಾಡುತ್ತಾರೆ ಎನ್ನುವುದು ಸಚ್ ದೇವ್ ಊಹೆ ಆಗಿತ್ತು. ಈತನ ಬೇಡಿಕೆಯಂತೆ ಇಬ್ಬರೂ ಬರೋಬ್ಬರಿ 30 ಸೆಕೆಂಡ್ ಗಳ ಕಾಲ್ ಲಿಪ್ ಲಾಕ್ (Lip Lock) ನಲ್ಲೇ ಇದ್ದರು. ಇದನ್ನೂ ಓದಿ:‘ಎಮರ್ಜೆನ್ಸಿ’ ನಂತರದ ಸಿನಿಮಾ ಸುಳಿವು ಕೊಟ್ಟ ಕಂಗನಾ ರಣಾವತ್

ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಅದನ್ನು ಸದುಪಯೋಗ ಪಡಿಸಿಕೊಂಡ ಆಕಾಂಕ್ಷ ಮತ್ತು ಜದ್ ಬರೋಬ್ಬರಿ ಅರ್ಧ ನಿಮಿಷಗಳ ಕಾಲ್ ಲಿಪ್ ಲಾಕ್ ಮಾಡಿಕೊಂಡಿದ್ದರು. ಅದನ್ನು ಕಂಡು ಪೂಜಾ ಭಟ್ ಇರಿಸುಮುರುಸುಗೊಂಡರು. ಥೋ.. ಸಾಕು ನಿಲ್ಲಿಸಿ ಎಂದು ಕೂಗಾಡಿದರು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿದ್ದರಿಂದ ಪೂಜಾ ಕೂಗು ಯಾರಿಗೂ ಕೇಳಿಸದಂತಾಯಿತು.

ಆಕಾಂಕ್ಷಾ ಮತ್ತು ಜದ್ ಲಿಪ್ ಲಾಕ್ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿದೆ. ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಸ್ಕ್ರಿಪ್ಟ್ ರೀತಿಯಲ್ಲೇ ನಡೆದುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಇಂಥದ್ದನ್ನು ಮಾಡುವುದಕ್ಕಾಗಿಯೇ ಇವರು ಇಲ್ಲಿಗೆ ಬಂದಿರುತ್ತಾರೆ ಎಂದು ಕಾಲೆಳೆದಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್