ಟಂಟಂ ಪಲ್ಟಿ 10 ಬಾಲಕಾರ್ಮಿಕರು ಸೇರಿ 30 ಜನರಿಗೆ ಗಂಭೀರ ಗಾಯ

Public TV
1 Min Read

ರಾಯಚೂರು: ಎಂಜಿನ್ ತಾಂತ್ರಿಕ ತೊಂದರೆಯಿಂದ ಟಂಟಂ ಪಲ್ಟಿಯಾಗಿ 10 ಜನ ಬಾಲಕಾರ್ಮಿಕರು ಸೇರಿ 30 ಕೃಷಿ ಕೂಲಿಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ದೇವದುರ್ಗದ ಮಲ್ಲೇದೇವರಗುಡ್ಡದ ಬಳಿ ನಡೆದಿದೆ.

ಈ ಅಪಘಾತದಲ್ಲಿ 7 ಜನರ ಸ್ಥಿತಿ ಚಿಂತಾಜನಕವಾಗಿದೆ. ಎಂಜಿನ್ ತಾಂತ್ರಿಕ ತೊಂದರೆಯಿಂದ ಟಂಟಂ ಪಲ್ಟಿಯಾಗಿದೆ. ಆಕಳಕುಂಪೆಯಿಂದ ಮಲದಕಲ್ ಗೆ ಕೂಲಿ ಕೆಲಸಕ್ಕೆ ಕೃಷಿ ಕೂಲಿಕಾರರನ್ನ ಕರೆದ್ಯೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ವಾಹನದಲ್ಲಿ ಹೆಚ್ಚು ಜನರನ್ನ ತುಂಬಿಕೊಂಡು ಹೋಗುತ್ತಿದ್ದರಿಂದ ಒಬ್ಬರ ಮೇಲೆ ಒಬ್ಬರು ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ದೇವದುರ್ಗದ ಅರಕೇರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಮಕ್ಕಳನ್ನ ಕೂಲಿಕೆಲಸಕ್ಕೆ ಬಳಸಿಕೊಳ್ಳುವುದು ಅಪರಾಧವಾದರೂ ಕೂಲಿ ಕಾರ್ಮಿಕರನ್ನ ಕೃಷಿ ಕೂಲಿಗೆ ಕರೆದೊಯ್ಯಲಾಗುತ್ತಿತ್ತು. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *