30 ವರ್ಷಗಳ ಪ್ರಯತ್ನ ಯಶಸ್ವಿ- ನೆಲದ ಮೇಲೆ ಓಡುತ್ತೆ, ಆಕಾಶದಲ್ಲಿ ಹಾರುತ್ತೆ ಕಾರು

Public TV
2 Min Read

– ಕೇವಲ 3 ನಿಮಿಷಗಳಲ್ಲಿ ಭೂಮಿಯಿಂದ ಆಕಾಶಕ್ಕೆ ಹಾರುತ್ತೆ
– ಪ್ರತಿ ಗಂಟೆಗೆ 200 ಕಿ.ಮೀ ವೇಗ

ಬ್ರಾಟಿಸ್ಲಾವಾ: ಸತತ 30 ವರ್ಷಗಳ ಪ್ರಯತ್ನದ ಬಳಿಕ ಕಂಪನಿಯೊಂದು ತನ್ನ ಕನಸನ್ನು ನನಸಾಗಿಸಿಕೊಂಡಿದ್ದು, ಹಾರುವ ಕಾರನ್ನು ಆವಿಷ್ಕರಿಸಿದೆ. ಈ ಕಾರ್ ನೆಲದ ಮೇಲೆ ಓಡುತ್ತೆ, ಮಾತ್ರವಲ್ಲದೆ ಆಕಾಶದಲ್ಲಿಯೂ ಹಾರುತ್ತದೆ.

ಹೌದು, ಯೂರೋಪ್‍ನ ಸ್ಲೋವಾಕಿಯಾ ದೇಶದ ಕ್ಲೈನ್ ವಿಷನ್ ಕಂಪನಿ ಏರ್ ಕಾರ್ ತಯಾರಿಸುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದೆ. ಇತ್ತೀಚಿನ ಪೀಳಿಗೆಯ ಫ್ಲೈಯಿಂಗ್ ಕಾರು ಪರೀಕ್ಷಾರ್ಥ ಹಾರಾಟವನ್ನುವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಿಳಿಸಿದೆ.

ಈ ಏರ್ ಕಾರ್ ಆಕಾಶದಲ್ಲಿ ಹಾರಬಲ್ಲದು, ಮಾತ್ರವಲ್ಲದೆ ನೆಲದ ಮೇಲೆ ಓಡಬಲ್ಲದು. ಹಾರುವ ವೇಳೆ ತನ್ನಷ್ಟಕ್ಕೆ ತಾನೇ ಏರೋಪ್ಲೇನ್ ಆಗಿ ಬದಲಾಗುತ್ತದೆ. ಏರ್ ಕಾರ್‍ನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಕಾರ್ ಸಾಮರ್ಥ್ಯ ಎಷ್ಟು?
ಏರ್ ಕಾರ್ 1,100 ಕೆ.ಜಿ.ತೂಕ ಇದ್ದು, ಹೆಚ್ಚುವರಿಯಾಗಿ 200 ಕೆ.ಜಿ.ತೂಕವನ್ನು ಹೊತ್ತಯ್ಯಬಲ್ಲದು. ಇತ್ತೀಚಿನ ಪೀಳಿಗೆಯ ಈ ಹಾರುವ ಕಾರನ್ನು ಕ್ಲೈನ್ ವಿಷನ್ ಕಂಪನಿ ಅಭಿವೃದ್ಧಿ ಪಡಿಸಿದ್ದು, ಕೇವಲ 3 ನಿಮಿಷಗಳೊಳಗೆ ಈ ಕಾರ್ ರಸ್ತೆಯಿಂದ ಆಕಾಶಕ್ಕೆ ಹಾರಬಲ್ಲದು.

ಈ ವಿಡಿಯೋವನ್ನು ಕ್ಲೈನ್ ವಿಷನ್ ತನ್ನ ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದು, ಭವಿಷ್ಯದ ವಾಹನವಾಗಿದೆ ಎಂದು ಬರೆದುಕೊಂಡಿದೆ. ಈ ವಿಡಿಯೋದಲ್ಲಿ ಏರ್ ಕಾರ್ ರೆಕ್ಕೆ ಬಿಚ್ಚಿ ಹಾರುವ ಮೊದಲು ರಸ್ತೆಯಲ್ಲಿ ಓಡಾಡುತ್ತದೆ.

ಈ ವಿಡಿಯೋ ನೋಡಿದ ಹಲವು ಜನ ಕಮೆಂಟ್ ಮಾಡುತ್ತಿದ್ದು, ಅತ್ಯಂತ ಪ್ರಭಾವಶಾಲಿ ಅಂತಿಮವಾಗಿ ಪ್ರಾಯೋಗಿಕ ಹಾರುವ ಕಾರ್ ಲಾಂಚ್ ಆಗಿದ್ದು, ತುಂಬಾ ಸುಂದರವಾಗಿದೆ. ಪ್ರೊಫೆಸರ್ ಕ್ಲೈನ್ ಮತ್ತು ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ವಾವ್, ಇದು ಆದಷ್ಟು ಬೇಗ ಸಾಧ್ಯವಾಗಬೇಕಿದೆ ಎಂದು ತಿಳಿಸಿದ್ದಾರೆ.

ಆಟೋ ಎವಲ್ಯೂಷನ್ ಪ್ರಕಾರ, ಅಂತಿಮ ಏರ್‍ಕಾರ್ ನ ಮೂಲ ಮಾದರಿಯನ್ನು 2019ರಲ್ಲಿ ಸಾರ್ವಜನಿಕರಿಗೆ ಪರಿಚಯಿಸಲಾಗಿತ್ತು. ಇತ್ತೀಚೆಗೆ ಸ್ಲೋವಾಕಿಯಾದ ಪಿಸ್ತಾನಿ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಎರಡು ಬಾರಿ ಹಾರಾಟ ಹಾಗೂ ಎರಡು ಬಾರಿ ಲ್ಯಾಂಡಿಂಗ್ ಎಲ್ಲ ನಾಲ್ಕು ಪ್ರಯೋಗಗಳು ಯಶಸ್ವಿಯಾಗಿದ್ದವು.

ಎಷ್ಟು ವೇಗದಲ್ಲಿ ಚಲಿಸುತ್ತೆ?
ಪ್ರೊಫೆಸರ್ ಸ್ಟೆಫನ್ ಕ್ಲೈನ್ ಅವರ ಕ್ಲೈನ್ ವಿಷನ್ ಕಂಪನಿಯ ಮಾಹಿತಿ ಪ್ರಕಾರ, ಈ ಏರ್‍ ಕಾರ್ ಭೂಮಿಯಿಂದ ಸುಮಾರು 300 ಮೀಟರ್ ಎತ್ತರದಲ್ಲಿ ಹಾರಾಟ ನಡೆಸಲಿದೆ. ಅಲ್ಲದೆ ಪ್ರತಿ ಗಂಟೆಗೆ 200 ಕಿ.ಮೀ.ವೇಗದಲ್ಲಿ ಚಲಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ. ಈ ಏರ್ ಕಾರ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ…

Share This Article
Leave a Comment

Leave a Reply

Your email address will not be published. Required fields are marked *