ವಾಶ್ ರೂಂನಲ್ಲಿ ಆಟವಾಡುತ್ತಿದೆಯೆಂದು 3 ವರ್ಷದ ಮಗುವಿಗೆ ಥಳಿಸಿದ ತಂದೆ

Public TV
1 Min Read

ಹೈದರಾಬಾದ್: ವಾಶ್‍ರೂಂನಲ್ಲಿ 3 ವರ್ಷದ ಮಗಳು ಆಡುತ್ತಿದ್ದುದ್ದನ್ನು ಕಂಡ ತಂದೆ ಕೋಪಿಸಿಕೊಂಡು, ಆಕೆಯನ್ನು ಥಳಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಮೂರು ವರ್ಷದ ಮಗುವೊಂದು ವಾಶ್‍ರೂಂನಲ್ಲಿ ಆಟವಾಡುತ್ತಿತ್ತು. ಇದನ್ನು ನೋಡಿದ ತಂದೆ ಆಕೆಗೆ ಹೊರಬರುವಂತೆ ಹೇಳಿದ್ದಾನೆ. ಆದರೂ ಬಾಲಕಿ ಹೊರಗೆ ಬರದಿದ್ದರಿಂದ ಅಲ್ಲೇ ಇದ್ದ ಕೋಲಿನಿಂದ ಹೊಡೆದಿದ್ದಾನೆ.

ಆ ಸಂದರ್ಭದಲ್ಲಿ ಬಾಲಕಿಯ ತಾಯಿ ಮಧ್ಯಪ್ರವೇಶಿಸಿದ್ದಾರೆ. ಆದರೆ ಅವಳನ್ನು ಕೆಳಗೆ ತಳ್ಳಿ, ನಂತರ ಮತ್ತೆ ಮಗುವಿಗೆ ಕೋಲಿನಿಂದ ಹೊಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕೈದಿಗಳಿಂದ ಮೊಬೈಲ್ ಬಳಕೆ – ಟೈಲ್ಸ್, ಗೋಡೆ ಕೊರೆದು ಬಚ್ಚಿಟ್ಟಿದ್ದ 19 ಫೋನ್ ವಶಕ್ಕೆ

POLICE JEEP

ಮಗುವಿನ ತಂದೆ, ತಾಯಿ 2015ರಲ್ಲಿ ಮದುವೆ ಆಗಿದ್ದು, ಅವರಿಗೆ 4 ಹೆಣ್ಣು ಮಕ್ಕಳಿದ್ದಾರೆ. ಜೊತೆಗೆ ಮಗುವಿನ ತಾಯಿ 8 ತಿಂಗಳ ಗರ್ಭಿಣಿಯಾಗಿದ್ದಾರೆ. ಘಟನೆ ಸಂಬಂಧಿಸಿ ಮಗುವಿನ ತಾಯಿಯು ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮಗಳನ್ನು ನೇಣಿಗೆ ಹಾಕಿ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *