12 ಮಹಡಿಯಿಂದ ಬಿದ್ದು 3 ವರ್ಷದ ಮಗು ಸಾವು

Public TV
1 Min Read

ಮುಂಬೈ: ಮೂರು ವರ್ಷದ ಪುಟ್ಟ ಮಗುವೊಂದು (3 Year Old) 12ನೇ ಮಹಡಿಯಿಂದ ಮೃತಪಟ್ಟ ಘಟನೆ ಮುಂಬೈನ (Mumbai) ನೈಗಾಂವ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ತಾಯಿ ತನ್ನ ಅಪಾರ್ಟ್‌ಮೆಂಟ್‌ನ ಹೊರಗೆ ಶೂ ರ‍್ಯಾಕ್ ಮೇಲೆ ಕೂರಿಸಿದಾಗ ಆಕಸ್ಮಿಕವಾಗಿ ಮಗು ಕಿಟಕಿ ಮೂಲಕ ಕೆಳಗೆ ಬಿದ್ದಿದೆ. ಇದನ್ನೂ ಓದಿ: PUBLiC TV Impact | ಕೊನೆಗೂ ದೇವದಾಸಿ ಮಹಿಳೆಯ ಮಗಳಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸೀಟು ಹಂಚಿಕೆ

ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ 8:15ಕ್ಕೆ ಈ ಘಟನೆ ಸಂಭವಿಸಿದೆ. ಬಾಲಕಿಯ ತಾಯಿ ಚಪ್ಪಲಿ ಹಾಕಿಸಿಕೊಳ್ಳಲು ಪ್ರಯತ್ನಿಸುವಾಗ ಅವಳನ್ನು ಶೂ ರ‍್ಯಾಕ್ ಮೇಲೆ ಕೂರಿಸಿದ್ದಳು. ತಾಯಿ ಚಪ್ಪಲಿ ಹಾಕುತ್ತಿದ್ದಾಗ ಬಾಲಕಿ ಹಿಂದಕ್ಕೆ ಬಾಗಿದ್ದಾಳೆ. ಈ ವೇಳೆ ನಿಯಂತ್ರಣ ತಪ್ಪಿ ಕಿಟಕಿಯಿಂದ ಕೆಳಗೆ ಬಿದ್ದಿದ್ದಾಳೆ.

ತಾಯಿಯ ಕಿರುಚಾಟ ಕೇಳಿದ ನಂತರ ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು. ತಾಯಿ ಚಪ್ಪಲಿ ಹಾಕುತ್ತಿರುವ ಮತ್ತು ಬಾಲಕಿ ಕಿಟಕಿಯಿಂದ ಕೆಳಗೆ ಬಿದ್ದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Share This Article