ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಮೂವರು ಭಯೋತ್ಪಾದಕರ ಹತ್ಯೆ

Public TV
1 Min Read

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕುಪ್ವಾರಾ ಜಿಲ್ಲೆಯಲ್ಲಿ 2 ಪ್ರತ್ಯೇಕ ಎನ್‌ಕೌಂಟರ್ (Encounter) ನಡೆಸಿದ ಭಾರತೀಯ ಭದ್ರತಾ ಪಡೆಗಳು (Indian Army) 3 ಭಯೋತ್ಪಾದಕರನ್ನು ಹತ್ಯೆ ಮಾಡಿದೆ.

ಆ.28ರ ಮಧ್ಯರಾತ್ರಿ ಜಿಲ್ಲೆಯಲ್ಲಿ 2 ಪ್ರತ್ಯೇಕ ಎನ್‌ಕೌಂಟರ್ ನಡೆಸಿದ ಭದ್ರತಾ ಪಡೆಗಳು, ಕುಶಾಲ್ ಪೊಸ್ಟ್ನ ಕರ್ನಾಹನಲ್ಲಿ (ತಂಗಧಾರ್) ಇಬ್ಬರು ಮತ್ತು ಗುಲಾಬ್ ಪೊಸ್ಟ್‌ನ ಕುಮಕಾರಿನ (ಮಿಚಿಲ್ ಸೆಕ್ಟರ್) ಪಕ್ಕದಲ್ಲಿ ಒಬ್ಬ ಭಯೋತ್ಪಾಕನನ್ನು ಹತ್ಯೆ ಮಾಡಿದೆ. ಭಾರೀ ಮಳೆಯಿಂದಾಗಿ ಭದ್ರತಾ ಪಡೆಗೆ ಭಯೋತ್ಪಾದಕರ ಮೃತದೇಹಗಳನ್ನು ವಶಪಡಿಸಲು ಆಗಲಿಲ್ಲ ಎಂದು ವರದಿಯಾಗಿದೆ.

ಭಾರತೀಯ ಸೈನ್ಯವು ದೇಶದಲ್ಲಿ ಒಳನುಸುಳಕೋರರ ವಿರುದ್ಧ ಆಪರೇಷನ್ ಕೈಗೊಂಡಿತ್ತು. ಇದೇ ವೇಳೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೆರೆಗೆ ಎನ್‌ಕೌಂಟರ್ ನಡೆಸಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Share This Article