ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಒಂದೇ ಕುಟುಂಬದ ಮೂವರು ಸಾವು

Public TV
1 Min Read

ಲಕ್ನೋ: ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

ಪ್ರಹ್ಲಾದ್ ಮಂಡಲ್ (60), ಅವರ ಮಗಳು ತನು ವಿಶ್ವಾಸ್ (32) ಮತ್ತು ಅವರ ಅಳಿಯ ಕಾರ್ತಿಕ್ ವಿಶ್ವಾಸ್ (38) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ – ಮಕ್ಕಳ ಸಾವು ನೆನೆದು ಕಣ್ಣೀರಿಟ್ಟ ಡಿಕೆಶಿ

ಪ್ರಹ್ಲಾದ್ ಮಂಡಲ್ ಅವರು ಇತ್ತೀಚೆಗೆ 8 ಅಡಿ ಆಳದ ಹೊಸ ಶೌಚ ಗುಂಡಿ ನಿರ್ಮಿಸಿದ್ದರು. ಇದರ ಸ್ವಚ್ಛಗೊಳಿಸಲು ಮಗಳು, ಅಳಿಯನೊಂದಿಗೆ ಇಳಿದಿದ್ದರು. ಈ ವೇಳೆ ಪಕ್ಕದ ಹಳೆಯ ಶೌಚ ಗುಂಡಿಯಿಂದ ಅನಿಲ ಸೋರಿಕೆಯಾಗಿದೆ. ಇದರಿಂದ ಆಳದ ಶೌಚ ಗುಂಡಿಯಿಂದ ಹೊರಬರಲಾರದೇ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಪ್ರಕರಣ – ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್

ತನು ವಿಶ್ವಾಸ್ ಅವರು ಪತಿ ಕಾರ್ತಿಕ್ ಹಾಗೂ ಮಕ್ಕಳೊಂದಿಗೆ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದರು. ತನು ಹಾಗೂ ಕಾರ್ತಿಕ್ ಅವರ ಸಾವಿನಿಂದ ಮಕ್ಕಳು ಅನಾಥರಾಗಿದ್ದಾರೆ. ಇದನ್ನೂ ಓದಿ: ಕಾಲ್ತುಳಿತದಲ್ಲಿ 11 ಮಂದಿ ಸಾವು – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

Share This Article