Bengaluru | ಬಾಗಿಲು ಮುಚ್ಚುವ ವೇಳೆ ಗನ್ ಹಿಡಿದು ಬಂದು ಚಿನ್ನದಂಗಡಿ ದರೋಡೆ

Public TV
1 Min Read

ಬೆಂಗಳೂರು: ಅಂಗಡಿ ಮುಚ್ಚುವ ವೇಳೆ ಗನ್ ಹಿಡಿದು ಬೆದರಿಸಿ ಚಿನ್ನದಂಗಡಿ (Jewellery Shop) ದೋಚಿ ಕಳ್ಳರು ಪರಾರಿಯಾದ ಘಟನೆ ಮಾದನಾಯಕನಹಳ್ಳಿ (Madanayakanahalli) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಚೋಹಳ್ಳಿ ಗೇಟ್‌ನ ರಾಮ್ ಜ್ಯುವೆಲರ್ಸ್ನಲ್ಲಿ ಘಟನೆ ನಡೆದಿದೆ. ಗುರುವಾರ ರಾತ್ರಿ 8:30ರ ಸುಮಾರಿಗೆ ಮೂವರು ಮುಸುಕುಧಾರಿಗಳು ಗನ್ ಹಿಡಿದು ಬಂದು ಕೃತ್ಯವೆಸಗಿದ್ದಾರೆ. ಜ್ಯುವೆಲ್ಲರಿ ಮಾಲೀಕ ಕನ್ನಯ್ಯಲಾಲ್ ಅಂಗಡಿ ಕ್ಲೋಸ್ ಮಾಡಲು ಮುಂದಾದ ವೇಳೆ ಗನ್ ಹಿಡಿದು ಮೂವರು ಅಂಗಡಿಗೆ ಎಂಟ್ರಿಕೊಟ್ಟಿದ್ದಾರೆ. ಗನ್ ಹಿಡಿದು ಹೆದರಿಸಿ ಟೇಬಲ್ ಮೇಲಿದ್ದ ಚಿನ್ನವನ್ನು ಬಾಚಿಕೊಂಡಿದ್ದಾರೆ. ಮಾಲೀಕ ಕನ್ನಯ್ಯಲಾಲ್ ಕೂಗಾಡಿದರೂ ಕನ್ನಯ್ಯಲಾಲ್ ಮತ್ತು ಸಿಬ್ಬಂದಿಯನ್ನು ತಳ್ಳಿ ಚಿನ್ನಾಭರಣ ದರೋಡೆ ಮಾಡಿದ್ದಾರೆ. ಇದನ್ನೂ ಓದಿ: ಕಾಫಿನಾಡಲ್ಲಿ ಮಳೆ ಅಬ್ಬರ – 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಇನ್ನು ಕೂಗಾಟ ಕೇಳಿ ಪಕ್ಕದ ಅಂಗಡಿಯ ಹುಡುಗ ಬಂದಿದ್ದು, ಆತನನ್ನು ತಳ್ಳಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕೈಗೆ ಸಿಕ್ಕ ಚಿನ್ನವನ್ನ ದೋಚಿ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಪ್ರಕರಣ – ಇಂದಿನಿಂದ ಎಸ್‌ಐಟಿ ತನಿಖೆ ಆರಂಭ

Share This Article