3 ಲಕ್ಷ ರೂ. ಕರೆಂಟ್ ಬಿಲ್ ಬಾಕಿ – ಕತ್ತಲಲ್ಲಿ ಉಡುಪಿ ಪ್ರವಾಸಿ ಮಂದಿರ

By
1 Min Read

ಉಡುಪಿ: ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಚುನಾವಣೆಗೆ ಮುನ್ನ ಘೋಷಣೆ ಮಾಡಿದ ಭಾಗ್ಯಗಳು ಈಗ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಯೋಜನೆಗಳನ್ನು ನಿಲ್ಲಿಸುವಂತಿಲ್ಲ, ಮುಂದುವರಿಸುವಂತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದೀಗ ಸರ್ಕಾರಿ ಕಟ್ಟಡಗಳಿಗೆ ಕರೆಂಟ್ ಬಿಲ್ (Electricity Bill) ಕಟ್ಟುವುದಕ್ಕೂ ಕಷ್ಟವಾಗಿದೆ.

ಉಡುಪಿ (Udupi) ನಗರದ ಪ್ರವಾಸಿ ಮಂದಿರದ ದೃಶ್ಯ ಇದು. ಕಳೆದ ಎರಡು ದಿನಗಳಿಂದ ಐಬಿಗೆ (Inspection Bungalow) ಕರೆಂಟ್ ಇಲ್ಲ. ಮೆಸ್ಕಾಂನವರು (MESCOM) ಟ್ರಾನ್ಸ್‌ಫಾರ್ಮರ್ ಕಂಬದಿಂದ ವಿದ್ಯುತ್ ಸ್ಥಗಿತ ಮಾಡಿದ್ದಾರೆ. ಉಡುಪಿಗೆ ಬಂದ ಸರ್ಕಾರಿ ಅಧಿಕಾರಿಗಳು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಐಬಿಗೆ ಭೇಟಿ ಕೊಟ್ಟು ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು.‌  ಇದನ್ನೂ ಓದಿ: ಇಸ್ರೇಲ್‌ ರಾಕೆಟ್‌ ದಾಳಿಗೆ ಲೆಬನಾನ್‌ ಛಿದ್ರ ಛಿದ್ರ – ಸಾವಿನ ಸಂಖ್ಯೆ 492ಕ್ಕೆ ಏರಿಕೆ!

ಸುಮಾರು ಒಂದು ವರ್ಷಗಳಿಂದ ಪ್ರವಾಸಿ ಮಂದಿರದ 3 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಮೂರ್ನಾಲ್ಕು ಬಾರಿ ನೋಟಿಸ್ ಕೊಟ್ಟ ಬೆಸ್ಕಾಂ ನೇರವಾಗಿ ಟ್ರಾನ್ಸ್‌ಫಾರ್ಮರ್ ಕಂಬದಿಂದ ವಿದ್ಯುತ್ ಸ್ಥಗಿತ ಮಾಡಿದೆ. ಈ ಬೆಳವಣಿಗೆ ವಿಚಾರದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತವಾಗಿದ್ದು ಸರ್ಕಾರಿ ಕಟ್ಟಡಗಳ ವಿದ್ಯುತ್ ಬಿಲ್ ಪಾವತಿಯಷ್ಟು ಕೂಡ ಸರ್ಕಾರದ ಬಳಿ ಹಣ ಇಲ್ವಾ ಎಂದು ಪ್ರಶ್ನೆಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್‌ ಹ್ಯಾಕ್‌ ಮಾಡಿ ಸ್ಫೋಟಿಲು ಸಾಧ್ಯವೇ? ಹ್ಯಾಕಿಂಗ್‌ ತಪ್ಪಿಸಲು ಏನು ಮಾಡ್ಬೇಕು?

ಒಟ್ಟಾರೆ ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು ಜನಪ್ರತಿನಿಧಿಗಳು ಬಂದು ಉಳಿದುಕೊಳ್ಳುವ ಐಬಿಯ ಪರಿಸ್ಥಿತಿ ಹೀಗಾಗಿದೆ. ಮೂರು ದಿನಗಳಿಂದ ಯಾರಿಗೂ ಐಬಿಯಲ್ಲಿ ಕೊಠಡಿಗಳನ್ನು ಕೊಡುತ್ತಿಲ್ಲ. ಸಮಸ್ಯೆ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದು, ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಸರ್ಕಾರ ಯಾವಾಗ ಹಣ ಬಿಡುಗಡೆ ಮಾಡುತ್ತದೋ ಕಾದು ನೋಡಬೇಕು. ಇದನ್ನೂ ಓದಿ: ಮೈಸೂರಿನಲ್ಲಿ ಮಹಿಷ ದಸರಾ ಫೈಟ್ – ಈ ಬಾರಿ `ಮಹಿಷ ಮಂಡಲೋತ್ಸವ’!

Share This Article