ರಾತ್ರಿ ವೇಳೆ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

Public TV
1 Min Read

ಯಾದಗಿರಿ: ರಾತ್ರಿ ವೇಳೆ ವಾಹನಗಳನ್ನು ತಡೆದು ದರೋಡೆ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಕೆಂಭಾವಿ ಪೊಲೀಸರು (Kembavi Police) ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಜು ಕರ್ನಾಳ, ಶಿವು ಹಳ್ಳೇಪ್ಪ ಹಾಗೂ ಸುನೀಲ್ ದೊಡ್ಡಮನಿ ಗುರುತಿಸಲಾಗಿದೆ. ಆರೋಪಿಗಳು ಸುರಪುರದ ನಗನೂರ ಹಾಗೂ ಕೆಂಭಾವಿ ಮಾರ್ಗ ಮಧ್ಯೆ ರಾತ್ರಿ ವೇಳೆ ಬೈಕ್‍ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರನ್ನು ಬೆದರಿಸಿ ಅವರಿಂದ ಹಣ ದೋಚುತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾಗ್ಪುರದ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಬ್ಲಾಸ್ಟ್ – ಐವರ ದುರ್ಮರಣ! 

ಬಂಧಿತರಿಂದ ಎರಡು ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಕೃತ್ಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಏನಿದು ಬಿಎಸ್‌ವೈ ವಿರುದ್ಧದ ಪೋಕ್ಸೊ ಕೇಸ್‌? – ಇಲ್ಲಿದೆ ನೋಡಿ ಟೈಮ್‌ಲೈನ್‌..

Share This Article