ನಿಂತಿದ್ದ ಲಾರಿಗೆ ಶವ ಸಾಗಿಸ್ತಿದ್ದ ಅಂಬುಲೆನ್ಸ್ ಡಿಕ್ಕಿ- ಮೂವರ ದುರ್ಮರಣ!

Public TV
1 Min Read

ಚಿತ್ರದುರ್ಗ: ನಿಂತಿದ್ದ ಲಾರಿಗೆ (Lorry) ಅಂಬುಲೆನ್ಸ್ (Ambulence) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಮಲ್ಲಾಪುರ (Mallapura) ಗ್ರಾಮದಲ್ಲಿ ನಡೆದಿದೆ.

ಮಲ್ಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದ್ದು, ಅಂಬುಲೆನ್ಸ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಬುಲೆನ್ಸ್ ಶವ ಸಾಗಿಸುತ್ತಿದ್ದು, ಗುಜರಾತ್‌ನಿಂದ (Gujarat) ತಮಿಳುನಾಡಿಗೆ (Tamil Nadu) ತೆರಳುತ್ತಿತ್ತು. ಅಹ್ಮದಾಬಾದ್‌ನಿಂದ ತಿರುನಾಳವೇಲಿಗೆ ತೆರಳುತ್ತಿದ್ದ ಸಂದರ್ಭ ಮಲ್ಲಾಪುರ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಬೆಂ-ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಭಯಾನಕ ಅಪಘಾತ- 5 ತಿಂಗಳಲ್ಲೇ 55 ಮಂದಿ ಸಾವು!

ಅಪಘಾತದಿಂದ ಅಂಬುಲೆನ್ಸ್‌ನಲ್ಲಿದ್ದ ಚಾಲಕ, ಕನಕಮಣಿ (72) ಮತ್ತು ಆಕಾಶ್ (17) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಬುಲೆನ್ಸ್‌ನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅಣ್ಣನ ಜೊತೆಗೆ ಐಸ್‌ಕ್ರೀಮ್‌ ತೆಗೆದುಕೊಂಡು ಬರುವಾಗ ಅಪಘಾತ – ಬಾಲಕ ಸಾವು

Share This Article