ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್‍ನಲ್ಲಿರುವ ಸರ್ಕಾರಿ ಬಾಲಮಂದಿರದಲ್ಲಿ ನಾಲ್ವರು ಬಾಲಕರು ಕಾವಲುಗಾರರ ಕಣ್ತಪ್ಪಿಸಿ ನಾಪತ್ತೆಯಾಗಿದ್ದಾರೆ.
ಬಾಲಮಂದಿರದ ಅಧಿಕಾರಿಗಳು ನಾಪತ್ತೆಯಾದ ಬಾಲಕರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಗರದ ಹೌಸಿಂಗ್ ಬೋರ್ಡ್‍ನಲ್ಲಿರುವ ಬಾಲಮಂದಿರದಲ್ಲಿ ಪ್ರಸ್ತುತ 24 ಮಕ್ಕಳಿದ್ದಾರೆ. ಆದರೆ, ಅವರಲ್ಲಿ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದಾರೆ. ಬಾಲಮಂದಿರದಲ್ಲಿ ಸಿಸಿಟಿವಿ ಇದ್ದು, ಕಾವಲುಗಾರರು ಇದ್ದಾರೆ. ಆದರೆ, ಸಿಸಿಟಿವಿ ಹಾಗೂ ಕಾವಲುಗಾರರ ಕಣ್ತಪ್ಪಿಸಿ ಬಾಲಮಂದಿರದ ಹಿಂದಿನ ಗೇಟಿನ ಬೀಗ ಮುರಿದು ಬಿಲ್ಡಿಂಗ್ ಪಕ್ಕದಲ್ಲಿದ್ದ ಮರದಿಂದ ಕೆಳಗೆ ಇಳಿದು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿಯ ಮೂವರು ಯುವತಿಯರು ನಾಪತ್ತೆ!
ನಾಪತ್ತೆಯಾದ ನಾಲ್ವರಲ್ಲಿ ಚಿಕ್ಕಮಗಳೂರು ತಾಲೂಕಿನ ಅಂಬಳೆ ಮೂಲದ ಓರ್ವ ಬಾಲಕ ಪತ್ತೆಯಾಗಿದ್ದಾನೆ. ಆದರೆ, ಉಳಿದ ಮೂವರು ಪತ್ತೆಯಾಗಿಲ್ಲ. ನಾಪತ್ತೆಯಾಗಿರುವವರೆಲ್ಲಾ 12-14 ವರ್ಷದೊಳಗಿನ ಮಕ್ಕಳು. ನಾಲ್ವರು ಹುಡುಗರು ಪರಸ್ಪರ ಮಾತನಾಡಿಕೊಂಡು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಉಳಿದ ಮೂವರು ವಿದ್ಯಾರ್ಥಿಗಳು ಇರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದೆ. ಆದರೆ, ಕನ್ಫರ್ಮ್ ಆಗುತ್ತಿಲ್ಲ. ಬಾಲಕರು ಅವರೇನಾ ಎಂದು ಇರುವ ಜಾಗವನ್ನು ಕನ್ಫರ್ಮ್ ಮಾಡಿಕೊಂಡು ಕರೆದುಕೊಂಡು ಬರಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಬಾಲಮಂದಿರದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರಲು ಆಗದೆ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲ ಮಂದಿರದ ಅಧಿಕಾರಿಗಳು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ