ಬ್ಯೂನಸ್ ಐರಿಸ್: ಮಾದಕ ವ್ಯಸನಿಗಳ ಗ್ಯಾಂಗ್‌ವೊಂದು ಅರ್ಜೆಂಟೀನಾದ ಮೂವರು ಯುವತಿಯರ ಹತ್ಯೆ ಮಾಡಿದ್ದು, ಕೊಲೆಯ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೇರಪ್ರಸಾರ ಮಾಡಿರುವ ಘಟನೆ ನಡೆದಿದೆ.
ಲಾರಾ ಗುಟೈರೆಜ್ (15), ಬ್ರೆಂಡಾ ಡೆಲ್ ಕ್ಯಾಸ್ಟಿಲ್ಲೊ, ಮೊರೆನಾ ವರ್ಡಿ (20) ಹತ್ಯೆಗೀಡಾದ ಯುವತಿಯರು. ಬೆಚ್ಚಿಬೀಳಿಸುವ ಘಟನೆಯನ್ನು ಖಂಡಿಸಿ ಅರ್ಜೆಂಟೀನಾದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಮೃತರ ಫೋಟೊಗಳನ್ನು ಹಿಡಿದುಕೊಂಡು ಸಂಸತ್ತಿಗೆ ಪ್ರತಿಭಟನಾ ಮೆರವಣೆಗೆ ನಡೆಸಲಾಯಿತು. ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪಾಕ್ ಭಯೋತ್ಪಾದನೆ ವೈಭವೀಕರಿಸುತ್ತಿದೆ, ವಿಶ್ವವೇದಿಕೆಯಲ್ಲಿ ಸುಳ್ಳು ಹರಡುತ್ತಿದೆ – ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು
ಐರಿಸ್‌ನ ದಕ್ಷಿಣ ಉಪನಗರದಲ್ಲಿರುವ ಮನೆಯ ಅಂಗಳದಲ್ಲಿ ಮೂವರ ಅಂತ್ಯಕ್ರಿಯೆ ನಡೆಸಲಾಗಿದೆ. ‘ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡಬೇಕು’ ಎಂದು ಬ್ರೆಂಡಾಳ ತಂದೆ ಲಿಯೋನೆಲ್ ಡೆಲ್ ಕ್ಯಾಸ್ಟಿಲ್ಲೊ ಪ್ರತಿಭಟನೆ ಆಗ್ರಹಿಸಿದ್ದಾರೆ. ನನ್ನ ಮಗಳ ದೇಹವನ್ನು ಗುರುತಿಸಲು ಸಾಧ್ಯವಾಗದ ಮಟ್ಟಿಗೆ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಕಣ್ಣೀರಿಟ್ಟಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರ ಪೈಕಿ ಒಬ್ಬಾತ, ವೀಡಿಯೋ ಮಾಡಿರುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದ. ಯುವತಿಯರ ಉಗುರು ಹೊರತೆಗೆದು, ಬೆರಳುಗಳನ್ನು ಕತ್ತರಿಸಿ, ಹೊಡೆದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಟ್ರಂಪ್ ದಿಟ್ಟತನದಿಂದ ಭಾರತದ ಜೊತೆ ಕದನ ವಿರಾಮ ಸಾಧ್ಯವಾಯ್ತು: ಹಾಡಿ ಹೊಗಳಿದ ಪಾಕ್ ಪ್ರಧಾನಿ