ಕಾಟಾಚಾರದ ಸರ್ವೇಗೆ 3.6 ಕೋಟಿ ವೆಚ್ಚ – ಬೇಕರಿ, ಅಂಗಡಿಗಳಿಗೂ ಜಾತಿ ಸಮೀಕ್ಷೆ ಸ್ಟಿಕ್ಕರ್!

Public TV
2 Min Read

ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸರ್ಕಾರ 3.6 ಕೋಟಿ ರೂ. ಖರ್ಚು ಮಾಡುತ್ತಿದೆ. ಬಿಬಿಎಂಪಿ (BBMP) ಸಿಬ್ಬಂದಿ ಮಾತ್ರ ಸಮೀಕ್ಷೆ ಮಾಡದೇ, ಕಾಟಾಚಾರಕ್ಕೆ ಸ್ಟಿಕ್ಕರ್ ಅಂಟಿಸುತ್ತಿರುವುದು ಬಯಲಾಗಿದೆ.

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ (SC Comprehensive Survey) 3.6 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಲ್ಲಿ ಒಂದು ಸ್ಟಿಕ್ಕರ್‌ನ ಬೆಲೆ 2.47 ಪೈಸೆ, ಸ್ಟಿಕ್ಕರ್ ಅಂಟಿಸಲು ಸಿಬ್ಬಂದಿಗೆ 5 ರೂ., ಒಂದು ಸ್ಟಿಕ್ಕರ್ ಪ್ರಿಂಟ್‌ಗೆ 7.47ರೂ., ಭಿತ್ರಿಪತ್ರಕ್ಕೆ 6 ರೂ., ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲು ಎರಡು ಕಿರು ಚಿತ್ರಗಳಿಗೆ ಪ್ರತಿ ಸೆಕೆಂಡಿಗೆ 35 ಸಾವಿರ ರೂ., ಸಂಪೂರ್ಣ ನಿರ್ಮಾಣಕ್ಕೆ 49.5 ಲಕ್ಷ ರೂ., 5 ಲಕ್ಷ ರೂ. ಮೌಲ್ಯದ 2 ಕ್ಯಾಮೆರಾಗಳು, ನಿರ್ದೇಶಕ, ಸಹಾಯಕ ನಿರ್ದೇಶಕ, ಕ್ಯಾಮೆರಾ ಮ್ಯಾನ್ ಸೇರಿ ಚಿತ್ರಿಕರಣದ ಸಾಧನಕ್ಕೆ 4 ಲಕ್ಷ ರೂ., ಕಲಾವಿದರಿಗೆ 2.98 ಲಕ್ಷ ರೂ., ಎಸ್‌ಎಸ್‌ಡಿ ಕಾರ್ಡ್ & ಡಿವಿಡಿ ಪೆನ್‌ಡ್ರೈವ್‌ಗೆ 1,500 ರೂ. ಖರ್ಚು ಮಾಡಲಾಗಿದೆ.ಇದನ್ನೂ ಓದಿ: ಲೇಡಿಸ್ ಬಾರ್‌ಗಳಲ್ಲಿ ನಿಯಮ ಉಲ್ಲಂಘನೆ – ಪ್ರತಿದಿನ ಸಿಸಿಟಿವಿ ಫೂಟೇಜ್ ಕೊಡುವಂತೆ ಸಿಸಿಬಿ ರೂಲ್ಸ್

ಇದಲ್ಲದೇ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಪ್ರಚಾರಕ್ಕೆ 28 ಲಕ್ಷ ರೂ., ಜನರಿಗೆ ಜಾಗೃತಿ ಮೂಡಿಸಲು 49.5 ಲಕ್ಷ ರೂ., ಒಂದು ವಾರದಲ್ಲಿ 14 ಆಟೋಗಳಲ್ಲಿ ಧ್ವನಿವರ್ಧಕದ ಮೂಲಕ 28 ವಿಧಾನಸಭಾ ಕ್ಷೇತ್ರದಲ್ಲಿ ಜಾಗೃತಿ ಅಭಿಯಾನ ನಡೆಸಲು ಆಟೋ ಬಾಡಿಗೆ 11 ಲಕ್ಷ ರೂ., ಜಾಗೃತಿಗೆ 6 ಲಕ್ಷ ರೂ. 3.70 ಭಿತ್ತಿ ಪತ್ರಕ್ಕೆ 22.2 ಲಕ್ಷ ರೂ. ವೆಚ್ಚವಾಗಿದೆ.

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಇಷ್ಟೆಲ್ಲಾ ಖರ್ಚು ಮಾಡಲಾಗಿದೆ. ಈವರೆಗೂ ಬೆಂಗಳೂರು ನಗರದಲ್ಲಿ 60%ರಷ್ಟು ಕೂಡ ಸರ್ವೇ ನಡೆದಿಲ್ಲ. ಇನ್ನೂ ಕೆಲವೆಡೆ ಸಮೀಕ್ಷೆ ಮಾಡದೇ ಸ್ಟಿಕ್ಕರ್ ಅಂಟಿಸಿದ್ದಾರೆ. ಜೊತೆಗೆ ಥಣಿಸಂದ್ರ ಭಾಗದಲ್ಲಿ ಬೇಕರಿ, ಕಾಂಡಿಮೆಟ್ಸ್ ಅಂಗಡಿಗಳಿಗೂ ಸಮೀಕ್ಷೆ ಪೂರ್ಣ ಎಂಬ ಸ್ಟಿಕ್ಕರ್ ಅಂಟಿಸಿದ್ದಾರೆ. ಈ ರೀತಿ ಅಂಗಡಿಗಳ ಮೇಲೆಯೂ ಸ್ಟಿಕ್ಕರ್ ಅಂಟಿಸಿರುವ ಬಿಬಿಎಂಪಿ ಸಿಬ್ಬಂದಿಯ ಅವಸ್ಥೆಯನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಂದ ಎಎಸ್‌ಪಿಗೆ ಅಪಮಾನ – ಬಿಜೆಪಿಯಿಂದ ರಾಜಕೀಯಕ್ಕೆ ಭರಮನಿ ಎಂಟ್ರಿ?

Share This Article