ದುಬೈ: ಆರಂಭದಲ್ಲಿ ಬ್ಯಾಟ್ಸ್ ಮನ್, ನಂತರ ಬೌಲರ್‌ಗಳ ಉತ್ತಮ ಪ್ರದರ್ಶನದಿಂದ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧದ ನಡೆದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ರನ್‌ಗಳಿಂದ ಜಯಗಳಿಸಿದೆ.
ಗೆಲ್ಲಲು 164 ರನ್‌ಗಳ ಗುರಿಯನ್ನು ಪಡೆದ ಹೈದರಾಬಾದ್ 19.4 ಓವರ್ ಗಳಲ್ಲಿ 153 ರನ್‌ಗಳಿಗೆ ಆಲೌಟ್ ಆಯ್ತು. ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಮೂರು ವಿಕೆಟ್ ಕಬಳಿಸಿ ಪಂದ್ಯಕ್ಕೆ ರೋಚಕ ತಿರುವ ನೀಡಿದರೆ ಸೈನಿ ಎರಡು ವಿಕೆಟ್ ಕೀಳುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ನೆರವಾದರು. ಇದನ್ನೂ ಓದಿ :29 ಎಸೆತದಲ್ಲಿ 50 ರನ್ ಚಚ್ಚಿದ ಎಬಿಡಿ
ತಿರುವು ಸಿಕ್ಕಿದ್ದು ಎಲ್ಲಿ? ನಾಯಕ ಡೇವಿಡ್ ವಾರ್ನರ್ ಆರಂಭದಲ್ಲೇ 6 ರನ್ ಗಳಿಸಿ ಔಟದರೂ ಜಾನಿ ಬೈರ್‌ಸ್ಟೋವ್ ಮತ್ತು ಮನೀಷ್ ಪಾಂಡೆ ಎರಡನೇ ವಿಕೆಟಿಗೆ 71 ರನ್‌ಗಳ ಜೊತೆಯಾಟವಾಡಿದರು.
11.6 ಓವರ್‌ನಲ್ಲಿ ತಂಡದ ಮೊತ್ತ 89 ಆಗಿದ್ದಾಗ 34 ರನ್( 33 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದಿದ್ದ ಮನೀಷ್ ಪಾಂಡೆ ಕ್ಯಾಚ್ ನೀಡಿದರೆ ಔಟಾದರೆ 121 ರನ್ ಆಗಿದ್ದಾಗ 61 ರನ್(43 ಎಸೆತ, 6 ಬೌಂಡರಿ, 2 ಸಿಕ್ಸರ್) ಚಚ್ಚಿದ್ದ ಜಾನಿ ಬೈರ್‌ಸ್ಟೋವ್ ಔಟಾದರು. ಇದನ್ನೂ ಓದಿ: ಭಾರತದ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಅಪರೂಪದ ಸಾಧನೆ
ಚಹಲ್ ಬೈರ್ ಸ್ಟೋವ್ ಅವರನ್ನು ಬೌಲ್ಡ್ ಮಾಡಿದ ಬೆನ್ನಲ್ಲೇ ಬೆನ್ನಲ್ಲೇ ವಿಜಯ್ ಶಂಕರ್ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿದರು. 89 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್ 121 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಚಹಲ್ ಪಂದ್ಯಕ್ಕೆ ರೋಚಕ ತಿರುವು ನೀಡಿದ ಬೆನ್ನಲ್ಲೇ ಪ್ರಿಯಂ ಗಾರ್ಗ್ ಬೌಲ್ಡ್ ಆದರು. ನಂತರಅಭಿಷೇಕ್ ಶರ್ಮಾ ರನೌಟ್ ಆದರು. ನಂತರ ಸೈನಿ ರಶೀದ್ ಖಾನ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಬೌಲ್ಡ್ ಮಾಡಿದರು. ಈ ಮೂಲಕ ಪಂದ್ಯ ಆರ್‌ಸಿಬಿಯತ್ತ ವಾಲಿತು.
ಚಹಲ್ 4 ಓವರ್ ಮಾಡಿ 18 ರನ್ ನೀಡಿ 3 ವಿಕೆಟ್ ಕಿತ್ತರೆ, ದುಬೆ 3 ಓವರ್ ಮಾಡಿ 15 ರನ್ ನೀಡಿ 2 ವಿಕೆಟ್ ಕಿತ್ತರು. ನವ್‌ದೀಪ್ ಸೈನಿ 2 ವಿಕೆಟ್, ಡೇಲ್ ಸ್ಟೇನ್ 1 ವಿಕೆಟ್ ಕಿತ್ತರು.