ಹಂದಿ ಹೃದಯ ಕಸಿಗೊಳಗಾಗಿದ್ದ ವಿಶ್ವದ 2ನೇ ವ್ಯಕ್ತಿ 40 ದಿನಗಳ ನಂತರ ಸಾವು

Public TV
2 Min Read

ವಾಷಿಂಗ್ಟನ್: ವಿಶ್ವದಲ್ಲೇ 2ನೇ ಬಾರಿಗೆ ಪ್ರಾಯೋಗಿಕವಾಗಿ ಹಂದಿಯ ಹೃದಯದ ಕಸಿಗೊಳಗಾಗಿದ್ದ (Heart Transplant) ಅಮೆರಿಕದ ವ್ಯಕ್ತಿ 40 ದಿನಗಳ ಬಳಿಕ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಲಾರೆನ್ಸ್ ಫೌಸೆಟ್ (58) ಹಂದಿಯ ಹೃದಯವನ್ನು (Pig Heart) ಕಸಿಯಾಗಿ ಪಡೆದಿದ್ದ ವಿಶ್ವದ 2ನೇ ವ್ಯಕ್ತಿಯಾಗಿದ್ದಾರೆ. ಸೆಪ್ಟೆಂಬರ್ 20 ರಂದು ಹೃದಯಾಘಾತದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಫೌಸೆಟ್‌ಗೆ ಕೊನೆಯ ಆಯ್ಕೆಯಾಗಿ ಹಂದಿಯ ಹೃದಯವನ್ನು ಕಸಿ ಮಾಡಲಾಗಿತ್ತು.

ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪ್ರಕಾರ, ಫೌಸೆಟ್‌ಗೆ ಹೃದಯ ಕಸಿ ಮಾಡಿದ ಬಳಿಕ 1 ತಿಂಗಳು ಆರೋಗ್ಯವಾಗಿದ್ದರು. ಆದರೆ ನಂತರದ ದಿನಗಳಲ್ಲಿ ಹೃದಯ ಸರಿಯಾಗಿ ಸ್ಪಂದಿಸದ ಲಕ್ಷಣಗಳು ತೋರಿಸಲಾರಂಭಿಸಿದೆ. ಶಸ್ತ್ರಚಿಕಿತ್ಸೆಯ ನಂತರ ಅವರು ಸುಮಾರು 6 ವಾರಗಳ ಕಾಲ ಬದುಕಿದ್ದರು. ಫೌಸೆಟ್ ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಫೌಸೆಟ್ ತನ್ನ ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿತ್ತು. ಅವರು ಎದ್ದು ಕುಳಿತುಕೊಳ್ಳುತ್ತಿದ್ದರು. ಆರಾಮಾಗಿ ಓಡಾಡುತ್ತಿದ್ದರು ಮಾತ್ರವಲ್ಲದೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದರು. ಅವರಿಗೆ ಮಾಡಲಾಗಿದ್ದ ಶಸ್ತ್ರಚಿಕಿತ್ಸೆಯೇನೋ ಯಶಸ್ವಿಯಾಗಿತ್ತು. ಆದರೆ ಬಳಿಕ ಮನುಷ್ಯನ ದೇಹಕ್ಕೆ ಹಂದಿಯ ಹೃದಯ ಹೊಂದಿಕೊಳ್ಳುವುದು ಕಷ್ಟವಾಗತೊಡಗಿತು. ವೈದ್ಯಕೀಯ ತಂಡದ ಸತತ ಪ್ರಯತ್ನಗಳ ಹೊರತಾಗಿಯೂ, ಫೌಸೆಟ್ ಅಂತಿಮವಾಗಿ ಅಕ್ಟೋಬರ್ 30 ರಂದು ಸಾವನ್ನಪ್ಪಿದರು ಎಂದು ಆಸ್ಪತ್ರೆ ತಿಳಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ಜೆಟ್ ಏರ್‌ವೇಸ್‌ನ 538 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಫೌಸೆಟ್ ಅವರು ನೌಕಾಪಡೆಯ ಅನುಭವಿ ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ನಿವೃತ್ತ ಲ್ಯಾಬ್ ತಂತ್ರಜ್ಞರಾಗಿದ್ದರು. ಈ ಬಗ್ಗೆ ಮಾತನಾಡಿರುವ ಫೌಸೆಟ್ ಅವರ ಪತ್ನಿ ಆನ್, ಅವರು ನಮ್ಮೊಂದಿಗೆ ಕಳೆಯಲು ಇದ್ದ ಸಮಯ ಕಡಿಮೆಯಿತ್ತು ಎಂಬುದನ್ನು ತಿಳಿದಿದ್ದರು. ಅವರು ನಮ್ಮೊಂದಿಗಿರಲು ಇದು ಕೊನೆಯ ಅವಕಾಶವಾಗಿತ್ತು. ಅವರು ಇಷ್ಟು ದಿನ ಬದುಕಿ ಉಳಿಯುತ್ತಾರೆ ಎಂದು ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಮೇರಿಲ್ಯಾಂಡ್ ತಂಡ ವಿಶ್ವದಲ್ಲೇ ಮೊದಲ ಬಾರಿಗೆ ಡೇವಿಡ್ ಬೆನೆಟ್ ಎಂಬವರಿಗೆ ಹಂದಿಯ ಹೃದಯವನ್ನು ಕಸಿ ಮಾಡಿತ್ತು. ಆದರೆ ಕಸಿ ಮಾಡಿದ 2 ತಿಂಗಳ ನಂತರ ಅವರು ನಿಧನರಾದರು. 57 ವರ್ಷದ ಬೆನೆಟ್ 2022ರ ಜನವರಿ 7 ರಂದು ಕಸಿ ಮಾಡಿಸಿಕೊಂಡಿದ್ದರು. ನಂತರ ಅದೇ ವರ್ಷ ಮಾರ್ಚ್ 8 ರಂದು ಸಾವನ್ನಪ್ಪಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ 3 ದಿನ ಆತಂಕ ಮೂಡಿಸಿ ಕೊನೆಗೂ ಸೆರೆ ಸಿಕ್ಕ ಚಿರತೆ ಸಾವು?

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್