4 ದಿನಗಳ ಅಂತರದಲ್ಲಿ 2ನೇ ಪ್ರಕರಣ ಬಯಲಿಗೆ – ಗರ್ಭಿಣಿ, ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ

By
1 Min Read

ಹಾಸನ: ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ (Anganwadi) ಕೊಳೆತ ಮೊಟ್ಟೆಗಳನ್ನು (Rotten Eggs) ವಿತರಣೆ ಮಾಡಿರುವ ಘಟನೆ ಹಾಸನ (Hassan) ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಲಕ್ಷ್ಮಿಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ಅಂಗನವಾಡಿ ಕೇಂದ್ರದಲ್ಲಿ ನೀಡಿದ ಮೊಟ್ಟೆಗಳನ್ನು ಪಡೆದು ಮನೆಯಲ್ಲಿ ಬೇಯಿಸಿ ಸಿಪ್ಪೆ ಸುಲಿದಾಗ ಮೊಟ್ಟೆಗಳು ಕೊಳೆತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅಂಗವಾಡಿ ಕೇಂದ್ರಕ್ಕೆ ಬಂದ ಗರ್ಭಿಣಿಯರು ಮೊಟ್ಟೆ ಪೂರೈಕೆ ಮಾಡುತ್ತಿರುವ ಗುತ್ತಿದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೆಯ ಹಾಗೂ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ವಿತರಣೆ ಮಾಡುತ್ತಿದ್ದಾರೆ. ಒಂದು ವೇಳೆ ಸಣ್ಣ ಮಕ್ಕಳು ಮೊಟ್ಟೆ ತಿಂದಿದ್ದರೆ ಏನಾದರೂ ಅನಾಹುತ ಸಂಭವಿಸುತ್ತಿತ್ತು. ಕೂಡಲೇ ಮೊಟ್ಟೆ ಪೂರೈಕೆ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇಂಗ್ಲಿಷ್ ಇರೋದೇ ತಪ್ಪು ಮಾತಾಡೋಕೆ, ಕನ್ನಡ ಇರೋದು ಸರಿಯಾಗಿ ಮಾತನಾಡಲು: ಪ್ರದೀಪ್ ಈಶ್ವರ್

ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಮೊಟ್ಟೆಗಳನ್ನು ಪರಿಶೀಲನೆ ಮಾಡದೆ ತೆಗೆದುಕೊಳ್ಳುತ್ತಿದ್ದಾರೆ. ಕೂಡಲೇ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕೇವಲ 4 ದಿನಗಳ ಅಂತರದಲ್ಲಿ ಹೊಳೆನರಸೀಪುರದಲ್ಲಿ 2ನೇ ಪ್ರಕರಣ ನಡೆದಿದೆ. ಕಳೆದ ಗುರುವಾರ ಹೊಳೆನರಸೀಪುರ ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಹಾಗೂ ಪುಟಾಣಿ ಮಕ್ಕಳಿಗೆ ಕೆಟ್ಟ ಮೊಟ್ಟೆಗಳನ್ನು ವಿತರಿಸಲಾಗಿತ್ತು. ಇದೀಗ ಹೊಳೆನರಸೀಪುರ ತಾಲೂಕಿನಲ್ಲಿ ಮತ್ತೊಂದು ಅಂಗನವಾಡಿ ಕೇಂದ್ರದಲ್ಲಿ ಕೊಳೆತ ಮೊಟ್ಟೆ ವಿತರಣೆ ಮಾಡಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಆಧಾರ್‌ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಕಕ್ಕಾಬಿಕ್ಕಿಯಾದ ಕಂಡಕ್ಟರ್‌

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್