ಬೆಳಗಾವಿ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಸಾವು; ಮಾರಣಾಂತಿಕ ವೈರಸ್‌ಗೆ ಬಲಿಯಾಗಿರೋ ಶಂಕೆ!

Public TV
1 Min Read

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳು (Blackbuck) ಏಕಾಏಕಿ ಸಾವನ್ನಪ್ಪಿದ್ದು, ಮಾರಣಾಂತಿಕ ವೈರಸ್‌ಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಬೆಳಗಾವಿ (Belagavi) ತಾಲೂಕಿನ ಭೂತರಾಮನಟ್ಟಿ ಗ್ರಾಮದಲ್ಲಿ ಇರೋ ಮೃಗಾಲಯದಲ್ಲಿದ್ದ (Kittur Rani Chennamma Zoo) 28 ಕೃಷ್ಣಮೃಗಗಳು ಸಾವನ್ನಪ್ಪಿವೆ. ನವೆಂಬರ್ 13 ರಂದು 8, ಇಂದು ಮತ್ತೆ 20 ಕೃಷ್ಣಮೃಗಳು ಸಾವನ್ನಪ್ಪಿವೆ. ಇದನ್ನೂ ಓದಿ: ದೇಶದ ಟಾಪ್-3 ಮಾದರಿ ಪೊಲೀಸ್ ಠಾಣೆಯಲ್ಲಿ ರಾಯಚೂರಿನ ಕವಿತಾಳ ಸ್ಟೇಷನ್ – ಕೇಂದ್ರ ಗೃಹ ಇಲಾಖೆಯಿಂದ ಆಯ್ಕೆ

ನವೆಂಬರ್‌ 13 ರಂದು ಸಾವನ್ನಪ್ಪಿದ್ದ ಕೃಷ್ಣಮೃಗಳ ಮರಣೋತ್ತರ ಪರೀಕ್ಷೆ ನಡೆಸಿ, ಸ್ಯಾಂಪಲ್ ಸಂಗ್ರಹಿಸಿ ಮೈಸೂರಿನ ಲ್ಯಾಬ್‌ಗೆ ರವಾನೆ ಮಾಡಲಾಗಿದೆ. ಲ್ಯಾಬ್‌ನಿಂದ ವರದಿ ಬರೋ ಮುನ್ನವೇ ಮತ್ತೆ 20 ಕೃಷ್ಣಮೃಗಳು ಸಾವನ್ನಪ್ಪಿವೆ. ಇದನ್ನೂ ಓದಿ: Chikkamagaluru| ಜಲಪಾತದ ಬಳಿ ಸೆಲ್ಫಿ ತೆಗೆಯುವಾಗ ಕಾಲು ಜಾರಿ ಬಿದ್ದು ಬಿ.ಇ ವಿದ್ಯಾರ್ಥಿ ಸಾವು

ಮಾರಣಾಂತಿಕ ವೈರಸ್‌ನಿಂದ ಮೃತಪಟ್ಟ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃಗಾಲಯದಲ್ಲಿ ‌ಒಟ್ಟು 38 ಕೃಷ್ಣಮೃಗಳಿದ್ದು ಆ ಪೈಕಿ 28 ಸಾವನ್ನಪ್ಪಿವೆ. ಇನ್ನು ಮೃಗಾಲಯಕ್ಕೆ ಬೆಳಗಾವಿ ಎಸಿಎಫ್ ನಾಗರಾಜ್ ಭೇಟಿ ಪರಿಶೀಲನೆ ನಡೆಸಿದ್ದು, ಮೈಸೂರಿನಂದ ವೈದ್ಯರ ತಂಡವನ್ನೂ ಸಹ ಅಧಿಕಾರಿಗಳು ಕರೆಸಲು ಮುಂದಾಗಿದ್ದಾರೆ.

Share This Article