ಜಪಾನ್‌ನ ಕ್ಲಿನಿಕ್‌ನಲ್ಲಿ ಅಗ್ನಿ ದುರಂತ – 27 ಜನರ ಸಾವು

Public TV
1 Min Read

ಟೋಕಿಯೋ: ಜಪಾನಿನ ಒಸಾಕಾ ನಗರದಲ್ಲಿನ ವೈದ್ಯಕೀಯ ಚಿಕಿತ್ಸಾಲಯವೊಂದರಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 27 ಜನರು ಸಾವನ್ನಪ್ಪಿದ್ದಾರೆ. ಕಟ್ಟಡದ ನಾಲ್ಕನೇ ಮಹಡಿಯಲ್ಲಿದ್ದ ಕ್ಲಿನಿಕ್‌ನಲ್ಲಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದ ಎಂಬ ವರದಿಗಳೂ ಕೇಳಿ ಬರುತ್ತಿದೆ.

ಜಪಾನ್ ಕಾಲಮಾನ ಬೆಳಗ್ಗೆ 10 ಗಂಟೆಗೆ ಕ್ಲಿನಿಕ್ ತೆರೆಯಲಾಗಿತ್ತು. ಈ ಸಂದರ್ಭದಲ್ಲಿ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಈ ಕಟ್ಟಡದಲ್ಲಿ ಸಲೂನ್, ಬಟ್ಟೆ ಅಂಗಡಿ ಹಾಗೆಯೇ ಇಂಗ್ಲಿಷ್ ಭಾಷೆಯ ಶಾಲೆಯೂ ಇತ್ತು ಎಂಬ ಮಾಹಿತಿ ಇದೆ. ಇದನ್ನೂ ಓದಿ: ವಿಶ್ವದಲ್ಲಿ 488 ಪತ್ರಕರ್ತರಿಗೆ ಜೈಲು ವಾಸ- ಚೀನಾ ನಂ.1

ಅಗ್ನಿ ದುರಂತ ಸಂಭವಿಸಿದ ಸ್ವಲ್ಪ ಹೊತ್ತಿನಲ್ಲೇ ಸುಮಾರು 70 ಅಗ್ನಿ ಶಾಮಕ ವಾಹನಗಳು ಸ್ಥಳದಲ್ಲಿ ನೆರೆದಿದ್ದು, ಸುಮಾರು ಅರ್ಧ ಗಂಟೆಯ ಬಳಿಕ ಬೆಂಕಿಯನ್ನು ನಂದಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಒಸಾಕಾ ಜಪಾನಿನ ಎರಡನೇ ಅತೀ ದೊಡ್ಡ ನಗರವಾಗಿದೆ. ತಂತ್ರಜ್ಞಾನದಲ್ಲಿ ಅತೀ ಹೆಚ್ಚು ಮುಂದುವರಿದ ದೇಶದಲ್ಲಿ ಇಂತಹ ಅವಘಡಗಳು ಸಂಭವಿಸುವುದು ತೀರಾ ವಿರಳ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಕಣ್ಣೀರು ಹಾಕುತ್ತಾ ಮಹಿಳೆ ಎಸ್ಕೇಪ್

2008ರಲ್ಲಿ ಒಸಾಕಾದಲ್ಲಿ ಅಂಗಡಿಯೊಂದರ ಮೇಲೆ ಬೆಂಕಿ ಬಿದ್ದಿದ್ದು, 16 ಮಂದಿ ಸಾವನ್ನಪ್ಪಿದ್ದರು. ಇದೇ ರೀತಿ 2019 ರಲ್ಲಿ ಕ್ಯೋಟೋ ನಗರದ ಅನಿಮೇಷನ್ ಸ್ಟುಡಿಯೋದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

Share This Article
Leave a Comment

Leave a Reply

Your email address will not be published. Required fields are marked *