27 ವಿದ್ಯುತ್ ಸಬ್‍ಸ್ಟೇಷನ್ ಉದ್ಘಾಟಿಸಿದ ಸಿಎಂ ಯೋಗಿ ಆದಿತ್ಯನಾಥ್

Public TV
1 Min Read

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೀಡಿಯೋ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ವಿದ್ಯುತ್ ಪ್ರಸರಣ ನಿಗಮ ಅಭಿವೃದ್ದಿ ಪಡಿಸಿದ 1,920 ಕೋಟಿ ರೂ. ವೆಚ್ಚದ 27 ವಿದ್ಯುತ್ ಸಬ್‍ಸ್ಟೇಷನ್‍ನನ್ನು ಶನಿವಾರ ಉದ್ಘಾಟಿಸಿದರು.

ಸಮಾರಂಭದ ವೇಳೆ ಮಾತನಾಡಿದ ಅವರು, ಉತ್ತಮ ಸಾಂಸ್ಕೃತಿಕ ಕಾರ್ಯವನ್ನು ಉತ್ತೇಜಿಸುವ ಮೂಲಕ ಸಾಮಾನ್ಯ ಜನರ ನಂಬಿಕೆಯನ್ನು ಬಲಪಡಿಸಿದ ಯುಪಿ ವಿದ್ಯುತ್ ಇಲಾಖೆಗೆ ಧನ್ಯವಾದ ತಿಳಿಸಿದರು.

ಲಾಕ್‍ಡೌನ್ ಸಮಯದಲ್ಲಿಯೂ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಮಾಡುವ ಮೂಲಕ ವಿದ್ಯುತ್ ನಿಗಮ ಉತ್ತಮವಾಗಿ ಕೆಲಸ ಮಾಡಿದೆ. ವಿದ್ಯುತ್ ನಿಗಮವು ರಾಜ್ಯದೊಳಗಿರುವ ಜಿಲ್ಲಾ ಕೇಂದ್ರಗಳಿಗೆ 23ರಿಂದ 24 ಗಂಟೆಗಳ ಕಾಲ, ತಹಶೀಲ್ದಾರ್ ಕೇಂದ್ರ ಕಚೇರಿಗಳಿಗೆ 20ರಿಂದ21 ಗಂಟೆ, ಗ್ರಾಮೀಣ ಪ್ರದೇಶಗಳಿಗೆ 17ರಿಂ 18 ಗಂಟೆ ಮತ್ತು ಬುಂದೇಲ್‍ಖಂಡ್ ಪ್ರದೇಶಕ್ಕೆ 20 ರಿಂದ 21 ಗಂಟೆಗಳವರೆ ವಿದ್ಯುತ್ ಸರಬರಾಜು ಮಾಡಿದೆ ಎಂದು ಹೇಳಿದರು.

ರಾಜ್ಯದ ರೈತರು ಕೂಡ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯವಾಗಲೆಂದು ವಿದ್ಯುತ್ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ ಎಂದರು. ಈ ವೇಳೆ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಯುಪಿ ವಿದ್ಯುತ್ ಸಚಿವ ಶ್ರೀಕಾಂತ್ ಶರ್ಮಾ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *