ಶ್ರೀರಾಮ ಮಂದಿರ ಉದ್ಘಾಟನೆಗೆ 2,500 ಸಂತರಿಗೆ ಆಹ್ವಾನ – ದಂಡ, ಚನ್ವಾರ್, ಛತ್ರ, ಪಾದುಕೆ ತರದಂತೆ ಮನವಿ

Public TV
1 Min Read

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದಲ್ಲಿ (Ayodhya Ram Mandir) ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆ ಬರದಿಂದ ಸಾಗಿದೆ. ಜನವರಿ 22 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸುವ ಕಾರ್ಯ ಪ್ರಗತಿಯಲ್ಲಿದ್ದು ಸುಮಾರು 7 ಸಾವಿರ ಗಣ್ಯರಿಗೆ ಆಥಿತ್ಯ ವಹಿಸಲು ನಿರ್ಧರಿಸಿದೆ.

ಅತಿಥಿಗಳ ಪಟ್ಟಿ ಅಂತಿಮಗೊಳಿಸಲು ರಾಮ್‌ಕೋಟ್‌ನಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಮಂಗಳವಾರ ಎರಡು ಗಂಟೆಗಳ ಕಾಲ ಸಭೆ ನಡೆಸಲಾಯಿತು. ಅತಿಥಿಗಳ ವಸತಿ, ಸಾರಿಗೆ, ಆಹಾರ ಇತ್ಯಾದಿ ವ್ಯವಸ್ಥೆಗಳ ಕುರಿತು ಚರ್ಚಿಸಲಾಯಿತು. ಅತಿಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ಪರಿಗಣಿಸಲಾಗಿದೆ. ಅಯೋಧ್ಯೆಯಿಂದಲೇ ಅತಿಥಿ ದೇವೋ ಭವ ಎಂಬ ಸಂದೇಶ ನೀಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಸಿಬ್ಬಂದಿಗೆ ಸಂಬಳ ನೀಡಲು ಬೆಂಗ್ಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟ ಬೈಜೂಸ್ ಸಂಸ್ಥಾಪಕ!

7 ಸಾವಿರ ಅತಿಥಿಗಳ ಪೈಕಿ ವಿಶೇಷವಾಗಿ ದೇಶಾದ್ಯಂತ ವಿವಿಧ ಸಂಪ್ರದಾಯಗಳ ಸುಮಾರು 2,500 ಋಷಿಮುನಿಗಳು ಮತ್ತು ಸಂತರನ್ನು (Saints) ಅಹ್ವಾನಿಸಲಾಗುತ್ತಿದೆ. ಅವರಿಗೆ ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಲಾಗುತ್ತಿದೆ. ಭದ್ರತಾ ದೃಷ್ಠಿಯಿಂದಲೂ ಭದ್ರತಾ ಏಜೇನ್ಸಿಗಳ ಜೊತೆಗೆ ಚರ್ಚೆ ಮಾಡಿದೆ. ಭದ್ರತಾ ಏಜೆನ್ಸಿಗಳ ಮನವಿಯ ಮೇರೆಗೆ, ದಂಡ, ಚನ್ವಾರ್, ಛತ್ರ ಮತ್ತು ಪಾದುಕೆಗಳನ್ನು ಸಮಾರಂಭಕ್ಕೆ ತರದಂತೆ ಸಂತರು ಮತ್ತು ಋಷಿಗಳಲ್ಲಿ ಟ್ರಸ್ಟ್ (Ram Mandir)   ಮನವಿ ಮಾಡಿದೆ. ಇದನ್ನೂ ಓದಿ: ಕಾರು ನಿಲ್ಲಿಸೋಕೆ 100*100 ಸೈಟು, ಕೋಟಿ-ಕೋಟಿ ಆಸ್ತಿ; ಸರ್ಕಾರಿ ಕಾಲೇಜು ಉಪನ್ಯಾಸಕನ ಮನೆ ಮೇಲೆ ಲೋಕಾಯುಕ್ತ ರೇಡ್‌

ಅತಿಥಿಗಳ ಜವಾಬ್ದಾರಿಯನ್ನು ಸಂಘವು ಕ್ಷೇತ್ರದ ಸಹ-ಸಂಪರ್ಕ ಮುಖ್ಯಸ್ಥ ಮನೋಜ್ ಜಿ ಅವರಿಗೆ ವಹಿಸಿದೆ. ಸಂಘದ ಅಖಿಲ ಭಾರತ ಸಂಪರ್ಕ ಮುಖ್ಯಸ್ಥ ರಾಮಲಾಲ್, ವಿಎಚ್‌ಪಿ ಸಂಘಟನೆ ಸಚಿವ ಕೋಟೇಶ್ವರ್, ವಿಎಚ್‌ಪಿ ಪೋಷಕ ಮಂಡಳಿ ಸದಸ್ಯ ದಿನೇಶ್ ಚಂದ್ರ, ವಿಎಚ್‌ಪಿ ಕೇಂದ್ರ ಸಚಿವ ಗಜೇಂದ್ರ ಸಿಂಗ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿ ಡಾ.ಅನಿಲ್ ಮಿಶ್ರಾ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಮೈಸೂರಿಗೆ ಕಳುಹಿಸಿಕೊಡಿ ಇಲ್ಲವೇ ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ: ಗೋಳಾಡಿದ ಮಾವುತ

Share This Article