ತುಮಕೂರು | ಮಧುಗಿರಿ ಪಟ್ಟಣ ಅಭಿವೃದ್ಧಿಗೆ ಸರ್ಕಾರದಿಂದ 25 ಕೋಟಿ‌ ಅನುದಾನ

Public TV
1 Min Read

ತುಮಕೂರು: ಮಧುಗಿರಿ ಪಟ್ಟಣದ ರಸ್ತೆ (Madhugiri Town Road) ಮತ್ತು ಚರಂಡಿ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 25 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.

ಪಟ್ಟಣದ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರು ಗೇಟ್‌ನಿಂದ ಶಿರಾ ರಸ್ತೆವರೆಗೆ, ಗೌರಿಬಿದನೂರು ಬೈಪಾಸ್‌ನಿಂದ ಸಿದ್ದಾಪುರ ಗೇಟ್‌ವರೆಗೆ ಡಬಲ್ ರಸ್ತೆ ಹಾಗೂ ಪಟ್ಟಣದ ಎಲ್ಲಾ ವಾರ್ಡ್‌ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಮಾಡಿಸಲಾಗುವುದು ಎಂದರು.

ಪಟ್ಟಣದ ಪ್ರಮುಖ ವೃತ್ತಗಳನ್ನು ವಿನೂತನವಾಗಿ ಅಭಿವೃದ್ಧಿ ಪಡಿಸಲಾಗುವುದು. ಹೈಟೆಕ್ ತಂಗುದಾಣ ನಿರ್ಮಾಣ, ವೈಜ್ಞಾನಿಕ ಹಂಪ್‌ ಹಾಗೂ ಪ್ರಮುಖ ರಸ್ತೆಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಇವತ್ತೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಕೇವಲ 20 ಸೀಟು ಬರುತ್ತದೆ – ಗೋವಿಂದ ಕಾರಜೋಳ

ರಾಜೀವ್ ಗಾಂಧಿ ಕ್ರೀಡಾಂಗಣದ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರಾಗಿದೆ. ಈ ಅನುದಾನ‌ದಲ್ಲಿ ಕ್ರೀಡಾಪಟುಗಳು ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು ಹೇಳಿದರು. ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ನೆರವೇರಿದ ರೇಣುಕಾಸ್ವಾಮಿ ಪುತ್ರನ ನಾಮಕರಣ – ಹೆಸರೇನು ಗೊತ್ತಾ?

Share This Article