Wayanad | ರೆಸಾರ್ಟ್‌ನಲ್ಲಿ ತಾತ್ಕಾಲಿಕ ಟೆಂಟ್ ಕುಸಿದು ಟೂರಿಸ್ಟ್ ಯುವತಿ ಸಾವು

Public TV
1 Min Read

– ಮೂವರು ಪ್ರವಾಸಿಗರಿಗೆ ಗಾಯ

ತಿರುವನಂತಪುರ: ತಾತ್ಕಾಲಿಕ ಟೆಂಟ್ (Makeshift Tent) ಕುಸಿದು 24 ವರ್ಷದ ಯುವತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಕೇರಳದ (Kerala) ವಯನಾಡ್ (Wayanad) ಜಿಲ್ಲೆಯ ಜನಪ್ರಿಯ ರೆಸಾರ್ಟ್‌ವೊಂದರಲ್ಲಿ ನಡೆದಿದೆ.

ಮೆಪ್ಪಾಡಿಯಲ್ಲಿರುವ 900 ಕಂಡಿ ಇಕೋಪಾರ್ಕ್ ಎಂಬ ರೆಸಾರ್ಟ್‌ನಲ್ಲಿ ಬುಧವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮೃತ ಯುವತಿಯನ್ನು ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಬಳಿಯ ಅಕಂಪಡಂ ಮೂಲದ ನಿಶ್ಮಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆ – 6 ಮಂದಿ ರಕ್ಷಣೆ

ಮರದ ಕಂಬಗಳು ಮತ್ತು ಒಣ ಹುಲ್ಲನ್ನು ಬಳಸಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಟೆಂಟ್ ನಾಲ್ವರು ಪ್ರವಾಸಿಗರ ಮೇಲೆ ಬಿದ್ದಿದೆ. ಘಟನೆಯಲ್ಲಿ ಯುವತಿ ನಿಶ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಗಾಯಗೊಂಡ ಮೂವರು ಪ್ರವಾಸಿಗರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌ ಇದನ್ನೂ ಓದಿ: ಮೊದಲು ಉಗ್ರರನ್ನು ಹಸ್ತಾಂತರಿಸಿ – ಪಾಕ್‌ನ ಸಿಂಧೂ ನದಿ ಒಪ್ಪಂದ ಮನವಿಗೆ ಜೈಶಂಕರ್‌ ಮಾತು

Share This Article