ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಮತ್ತು ಮರಣ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಮುಖಗೊಂಡಿದೆ. ಒಟ್ಟು 2,372 ಒಟ್ಟು ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 27 ಮರಣ ಪ್ರಕರಣ ದಾಖಲಾಗಿದೆ.
ನಾಲ್ಕು ಜಿಲ್ಲೆಗಳಾದ ಹಾವೇರಿಯಲ್ಲಿ 7, ಕೊಪ್ಪಳ 6, ರಾಮನಗರ 8 ಮತ್ತು ಯಾದಗಿರಿ 6 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದು ಮೂರನೇ ಅಲೆ ಕೊರೊನಾದ ಬಳಿಕ ಜಿಲ್ಲೆಗಳಲ್ಲಿ ದಾಖಲಾದ ಹೆಚ್ಚು ಒಂದಂಕಿ ಪ್ರಕರಣವಾಗಿದೆ. ಪಾಸಿಟಿವಿಟಿ ರೇಟ್ 2.31%ಕ್ಕೆ ಇಳಿಕೆ ಕಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 35,697ಕ್ಕೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 1,059 ಹೊಸ ಕೇಸ್ ಪತ್ತೆಯಾಗಿದ್ದು, 7 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗುಟ್ಕಾ ತಿಂದ ಮಗನ ಮುಖಕ್ಕೆ ಖಾರ ಮಸಾಲೆ ಹಚ್ಚಿದ ತಾಯಿ – ವೀಡಿಯೋ ವೈರಲ್
ರಾಜ್ಯದಲ್ಲಿ ಒಟ್ಟು 5,395 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,26,669 ಮಂದಿಗೆ ಕೊರೊನಾ ಬಂದಿದೆ. ಒಟ್ಟು 38,51,298 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.1.13% ರಷ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 24,052 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,02,279 ಸ್ಯಾಂಪಲ್ (ಆರ್‌ಟಿಪಿಸಿಆರ್ 81,101 + 21,178 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರು – 7 ಮಂದಿಯ ರಕ್ಷಣೆ
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 15, ಬಳ್ಳಾರಿ 112, ಬೆಳಗಾವಿ 96, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 1,059, ಬೀದರ್ 20, ಚಾಮರಾಜನಗರ 27, ಚಿಕ್ಕಬಳ್ಳಾಪುರ 27, ಚಿಕ್ಕಮಗಳೂರು 35, ಚಿತ್ರದುರ್ಗ 53, ದಕ್ಷಿಣ ಕನ್ನಡ 92, ದಾವಣಗೆರೆ 28, ಧಾರವಾಡ 72, ಗದಗ 30, ಹಾಸನ 59, ಹಾವೇರಿ 7, ಕಲಬುರಗಿ 34, ಕೊಡಗು 69, ಕೋಲಾರ 18, ಕೊಪ್ಪಳ 6, ಮಂಡ್ಯ 51, ಮೈಸೂರು 148, ರಾಯಚೂರು 17, ರಾಮನಗರ 8, ಶಿವಮೊಗ್ಗ 72, ತುಮಕೂರು 74, ಉಡುಪಿ 54, ಉತ್ತರ ಕನ್ನಡ 29, ವಿಜಯಪುರ 41 ಮತ್ತು ಯಾದಗಿರಿಯಲ್ಲಿ 6 ಪಾಸಿಟಿವ್ ಪ್ರಕರಣ ದಾಖಲಾಗಿದೆ.