Kisi Ka Bhai Kisi Ki Jaan:ರಿಲೀಸ್‌ಗೂ ಮೊದಲೇ 23000 ಟಿಕೆಟ್‌ ಮಾರಾಟ

Public TV
1 Min Read

ಬಾಲಿವುಡ್‌ನ (Bollywood) ಗಲ್ಲಾಪೆಟ್ಟಿಗೆಯಲ್ಲಿ ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗಿತ್ತು. ಬಿಟೌನ್ ಅಂಗಳದಲ್ಲಿ ದಕ್ಷಿಣ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಈ ವರ್ಷ ‘ಪಠಾಣ್’ (Pathaan) ಸಿನಿಮಾದ ಕಲೆಕ್ಷನ್‌ನಿಂದ ಬಾಲಿವುಡ್‌ಗೆ ಶುಕ್ರದಸೆ ಶುರುವಾಗಿದೆ. ಶಾರುಖ್ ಖಾನ್ ಸಿನಿಮಾ ನಂತರ ಈಗ ಸಲ್ಮಾನ್ ಖಾನ್ ಸಿನಿಮಾ ತೆರೆಯ ಮೇಲೆ ಅಬ್ಬರಿಸೋಕೆ ರೆಡಿಯಾಗಿದೆ. ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಿಲೀಸ್‌ಗೂ ಮುನ್ನವೇ 23000 ಟಿಕೆಟ್ ಸೇಲ್ ಆಗಿದೆ.

ಭಾಯಿ ಜಾನ್ ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ಈದ್ ಪ್ರಯುಕ್ತ ಏ.21ರಂದು ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಐನಾಕ್ಸ್, ಪಿವಿರ್, ಸಿನೆಪೊಲೀಸ್ ಇನ್ನಿತರೆ ಕೆಲವು ಪ್ರಮುಖ ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್‌ಗೂ ಮೊದಲೇ ಈ ಸಿನಿಮಾದ 23000 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಹಾಗಾಗಿ ಈ ಸಿನಿಮಾ ‘ಪಠಾಣ್ʼ ಚಿತ್ರದಂತೆ ದೊಡ್ಡ ಓಪನಿಂಗ್ ಪಡೆಯುವ ನಿರೀಕ್ಷೆ ಸಿನಿಪ್ರೇಮಿಗಳಿಗೆ ಇದೆ.

ಮಲ್ಟಿಪ್ಲೆಕ್ಸ್‌ನಲ್ಲಿ ಈವರೆಗೆ ಮುಂಗಡವಾಗಿ ಸೇಲ್ ಆಗಿರುವ ಟಿಕೆಟ್‌ಗಳ ಮೊತ್ತವೇ ಸುಮಾರು 50 ಲಕ್ಷಕ್ಕೂ ಹೆಚ್ಚಿದೆ. ಹಾಗಾಗಿಯೇ ಸಲ್ಮಾನ್ ಖಾನ್ – ಪೂಜಾ ಹೆಗ್ಡೆ ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಾಟಾಗಿದೆ. ಇದನ್ನೂ ಓದಿ:ರೋಸಿ ಟೈಟಲ್ ವಿವಾದ : ಶಿವರಾಜ್ ಕುಮಾರ್ ಗೆ ಮನವಿ ಮಾಡಿದ ಯೋಗಿ

‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಟ್ರೈಲರ್ – ಹಾಡುಗಳಿಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ರಾಮ್ ಚರಣ್, ವೆಂಕಟೇಶ್ ಗೆಸ್ಟ್ ರೋಲ್ ನಿರ್ವಹಿಸಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ರಾಧೆ’ ಸೇರಿದಂತೆ ಕೆಲ ಸಿನಿಮಾಗಳು ಗೆಲ್ಲಾಪೆಟ್ಟಿಗೆಯಲ್ಲಿ ಸೋತಿದೆ. ಈ ವರ್ಷ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಕಲೆಕ್ಷನ್ ವಿಷ್ಯ ಹಿಸ್ಟರಿ ಕ್ರಿಯೆಟ್ ಮಾಡುತ್ತಾ ಕಾದುನೋಡಬೇಕಿದೆ.

Share This Article