ಹರಿಯಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹೋದ್ಯೋಗಿಯ ಮೇಲೆ ಫೈರಿಂಗ್

Public TV
1 Min Read

ಚಂಡೀಗಢ: ಕ್ಷುಲ್ಲಕ ಕಾರಣಕ್ಕಾಗಿ ಸಹೋದ್ಯೋಗಿಯ (Co-worker) ಮೇಲೆ ಗುಂಡು ಹಾರಿಸಿದ ಪ್ರಕರಣ ಹರಿಯಾಣದ ಗುರುಗ್ರಾಮದಲ್ಲಿ (Gurgaon) ನಡೆದಿದೆ.

ಕಚೇರಿಯಲ್ಲಿ ಕುರ್ಚಿ (Chair) ವಿಚಾರಕ್ಕೆ ಅಮನ್ ಹಾಗೂ ವಿಶಾಲ್ ಎಂಬುವವರ ಮಧ್ಯೆ ಗಲಾಟೆ ನಡೆದಿದೆ. ಇದೇ ದ್ವೇಷದಲ್ಲಿ ಅಮನ್, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿಶಾಲ್ (23) ಮೇಲೆ ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ರಾಮ ಮಂದಿರದ ಹೊರಗೆ ಗಲಾಟೆ- ಉದ್ರಿಕ್ತರಿಂದ ಪೊಲೀಸ್ ವಾಹನಕ್ಕೆ ಬೆಂಕಿ

CRIME 2

ತಕ್ಷಣವೇ ಪೊಲೀಸರು (Police) ಗಾಯಗೊಂಡಿದ್ದ ವಿಶಾಲ್‍ನನ್ನು ಆಸ್ಪತ್ರೆಗೆ (Hospital)ದಾಖಲಿಸಿ, ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ಸಂತ್ರಸ್ತನ ಸಹೋದರ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯ ವಿರುದ್ಧ ಸೆಕ್ಷನ್ 307 (ಕೊಲೆ ಯತ್ನ), ಶಸ್ತ್ರಾಸ್ತ್ರ ಕಾಯ್ದೆಯ ಅನ್ವಯ 25-54-59ರ ಅಡಿ ಪ್ರಕರಣ ದಾಖಲಿಸಿದ್ದಾರೆ.

ಮಂಗಳವಾರ ಕುರ್ಚಿ ವಿಚಾರಕ್ಕಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಬುಧವಾರ ಸಹ ಅದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ವಿಶಾಲ್ ಕಚೇರಿಯಿಂದ ಹೊರ ನಡೆದಿದ್ದರು. ಈ ವೇಳೆ ಆರೋಪಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಗುರುತಿಸಲಾಗಿದ್ದು, ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಶೀಘ್ರವೇ ಬಂಧಿಸಲಾಗುವುದು ಎಂದು ಡಿಸಿಪಿ ವೀರೇಂದ್ರ ವಿಜ್ ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ 60 ರೂ. ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲ – ಶಾಮನೂರು ನೀಡಿದ ಸೀರೆಗಳಿಗೆ ಬೆಂಕಿಯಿಟ್ಟ ಮಹಿಳೆಯರು

Share This Article