ಧಾರವಾಡ: ಅಮೆರಿಕ – ಇರಾನ್ ನಡುವಿನ ಸಂಘರ್ಷದಿಂದಾಗಿ ಉಮ್ರಾ (Umrah) ಯಾತ್ರೆಗೆ ತೆರಳಿದ್ದ ಉತ್ತರ ಕರ್ನಾಟಕದ 23 ಯಾತ್ರಿಕರು (Islamic Pilgrimage) ಸೌದಿ ಅರೇಬಿಯಾದಲ್ಲೇ ಲಾಕ್ ಆಗಿದ್ದಾರೆ.
ಕಳೆದ ಫೆ.8 ರಂದು ಭಾರತದಿಂದ ಉಮ್ರಾ ಮಾಡಲು ಸೌದಿ ಅರೇಬಿಯಾಗೆ (Saudi Arabia) ಹೋಗಿದ್ದ 23 ಸದಸ್ಯರು ಫೆ.28 ರಂದು ಭಾರತಕ್ಕೆ ವಾಪಸ್ ಆಗಬೇಕಿತ್ತು. ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡು ಮದಿನಾದಿಂದ 150 ಕಿಮೀ ದೂರದಲ್ಲಿರುವ ಏರ್ಪೋರ್ಟ್ ಕಡೆಗೆ ಹೊರಟಿದ್ದರು. ಆದ್ರೆ ಯುದ್ಧ ಆರಂಭವಾದ ಹಿನ್ನೆಲೆ ಇವರು ಮದಿನಾಗೆ ಮತ್ತೇ ವಾಪಾಸ್ ಆಗಿದ್ದಾರೆ. ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಮುಳುಗಿದ್ರೂ ಮೋದಿ ಏಕೆ ಮೌನ? – ರಾಗಾ ಪ್ರಶ್ನೆ
ಸದ್ಯ 7 ದಿನದಿಂದ ಮದಿನಾದಲ್ಲೇ ಇರುವ ಈ 23 ಜನರಲ್ಲಿ, ಧಾರವಾಡದ ನೌಶಾದ್ ಕೊಟಬಾಗಿ, ಜೈಬುನ್ನಿಸಾ, ಫರೀದಾ ಬೇಗಂ ಕೂಡಾ ಇದಾರೆ. ಇನ್ನು ಈ ಗುಂಪಿನಲ್ಲಿ ಬೆಳಗಾವಿಯ 2, ಹುಬ್ಬಳ್ಳಿ 5, ಬೈಲಹೊಂಗಲದ 2, ಬಳ್ಳಾರಿ 2, ಧಾರವಾಡದ 10 ಮಂದಿ ಸೇರಿ 23 ಜನ ಸಿಲುಕಿದ್ದಾರೆ. ಇದನ್ನೂ ಓದಿ: `ಆಪರೇಷನ್ ಎಪಿಕ್ ಫ್ಯೂರಿ’ – ಇರಾನ್ ವಿರುದ್ಧದ ಯುದ್ಧಕ್ಕೆ 100 ಗಂಟೆ; ವೀಡಿಯೋ ಹಂಚಿಕೊಂಡ ಯುಎಸ್

