ವಾಮಾಚಾರ ಮಾಡುತ್ತಿರುವುದಾಗಿ ಶಂಕಿಸಿ ಮಹಿಳೆಯ ಹತ್ಯೆ – 23 ಜನರಿಗೆ ಜೀವಾವಧಿ ಶಿಕ್ಷೆ

Public TV
1 Min Read

ದಿಸ್ಪುರ್: ವಾಮಾಚಾರ (Witchcraft) ಮಾಡುತ್ತಿರುವುದಾಗಿ ಶಂಕಿಸಿ, ಮಹಿಳೆಯೊಬ್ಬಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಅಪರಾಧಿಗಳಿಗೆ ಆಸ್ಸಾಂ (Assam) ಚರೈಡಿಯೋ (Charaideo) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.ಇದನ್ನೂ ಓದಿ: 47ನೇ ವಯಸ್ಸಲ್ಲಿ ಖ್ಯಾತ ನಟಿಯನ್ನು ಮದುವೆಯಾಗಲಿದ್ದಾರೆ ನಟ ವಿಶಾಲ್‌ – ಯಾರು ಗೊತ್ತಾ ಆ ಬೆಡಗಿ?

2012ರಲ್ಲಿ ಮಾಟ ಮಂತ್ರ ಮಾಡುತ್ತಿರುವುದಾಗಿ ಶಂಕಿಸಿ ಮೇಲೆ ಮಹಿಳೆಯೊಬ್ಬರ ಹತ್ಯೆ ನಡೆದಿತ್ತು. ಮೃತ ಮಹಿಳೆ ಚರೈಡಿಯೋದಲ್ಲಿರುವ ಜಲ್ಹಾ ಗ್ರಾಮದಲ್ಲಿ ಮಾಟಮಂತ್ರ ಮಾಡುತ್ತಿದ್ದರು ಎಂದು ಶಂಕಿಸಿ, ಜನರ ಗುಂಪೊಂದು ಆಕೆಗೆ ದೈಹಿಕ ಚಿತ್ರಹಿಂಸೆ ನೀಡಿ, ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಆ ಸಮಯದಲ್ಲಿ ಈ ಪ್ರಕರಣ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ 13 ವರ್ಷಗಳ ವಿಚಾರಣೆಯ ಬಳಿಕ ನ್ಯಾಯಾಲಯ ಆದೇಶ ಹೊರಡಿಸಿದೆ.

ಚರೈಡಿಯೋ ಜಿಲ್ಲಾ ಮತ್ತು ಸೆಷನ್ಸ್ ನ್ಯಾ.ಅಬುಬಕ್ಕರ್ ಸಿದ್ದೀಕ್ ಅವರು 12 ಪುರುಷರು ಮತ್ತು 11 ಮಹಿಳೆಯರನ್ನು ಅಪರಾಧಿಗಳೆಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ಮತ್ತು ತಲಾ 5,000 ರೂ. ದಂಡ ವಿಧಿಸಿದ್ದಾರೆ ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ನೀಡುವಂತೆ ಅಪರಾಧಿಗಳಿಗೆ ಸೂಚಿಸಿದ್ದಾರೆ.ಇದನ್ನೂ ಓದಿ: ಪಾಕ್‌ನಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ, ಕದನ ವಿರಾಮದಲ್ಲಿ ಅಮೆರಿಕದ ಪಾತ್ರ ಇಲ್ಲ: ವಿಕ್ರಂ ಮಿಸ್ರಿ

Share This Article