ಚೀನಾದ ಹೋಟೆಲ್‌ನಲ್ಲಿ ಭಾರೀ ಬೆಂಕಿ – 22 ಮಂದಿ‌ ಸಾವು, ಮೂವರಿಗೆ ಗಾಯ

Public TV
10 Min Read

ಬೀಜಿಂಗ್‌: ಚೀನಾದ ರೆಸ್ಟೋರೆಂಟ್‌ವೊಂದರಲ್ಲಿ (China Restaurant) ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 22 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಲಿಯಾನಿಂಗ್‌ ಪ್ರಾಂತ್ಯದ ಲಿಯಾಯಾಂಗ್‌ನ ಬೈಟಾ ಜಿಲ್ಲೆಯ ಚುನಿಯಾಂಗ್ ರೆಸ್ಟೋರೆಂಟ್‌ನಲ್ಲಿ (Chuniang Restaurant) ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

ಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಬೈರನ್ ವಾನ್ ಎನ್ನುವ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ 43 ಸೆಕೆಂಡುಗಳ ವಿಡಿಯೋದಲ್ಲಿ ಅಗ್ನಿ ಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವುದನ್ನು ಕಾಣಬಹುದು. ಅಗ್ನಿ ವ್ಯಾಪಿಸುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಜನರು ಕಾಲ್ಕಿತ್ತಿದ್ದಾರೆ. ಇನ್ನೂ ಕೆಲವರು ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುವಲ್ಲಿ ನಿರತರಾಗಿದ್ದರು. ಇದನ್ನೂ ಓದಿ: Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್‌ ಸಭೆ

ಸದ್ಯ ಪ್ರಾಥಮಿಕ ಮೂಲಗಳ ಪ್ರಕಾರ ಮೊದಲು ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ರೆಸ್ಟೋರೆಂಟ್‌ಗೆ ವ್ಯಾಪಿಸಿದೆ. ಈ ಕುರಿತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ. ಇದನ್ನೂ ಓದಿ: IPL 2025 | ಒಂದೇ ಒಂದು ತೂಫಾನ್‌ ಶತಕ – ವೈಭವ್‌ಗೆ 10 ಲಕ್ಷ ರೂ. ಬಹುಮಾನ!

Share This Article