ನಂದಮೂರಿ ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ 21ನೇ ಸಿನಿಮಾ ಅನೌನ್ಸ್

By
1 Min Read

ಜ್ಯೂನಿಯರ್ ಎನ್.ಟಿ.ಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ (Birthday) ಸಾಲು ಸಾಲು ಉಡುಗೊರೆಗಳು ಸಿಕ್ಕಿದೆ. ಒಂದು ಕಡೆ ಡೆವಿಲ್ ಸಿನಿಮಾದ ಗ್ಲಿಂಪ್ಸ್, ಮತ್ತೊಂದು ಕಡೆ ಕಲ್ಯಾಣ್ ಅವರ 21ನೇ ಚಿತ್ರ ಕೂಡ ಅನೌನ್ಸ್ ಆಗಿದೆ. ಅಶೋಕ ಕ್ರಿಯೇಷನ್ ಹಾಗೂ ಎನ್ ಟಿಆರ್ ಆರ್ಟ್ಸ್ ಬ್ಯಾನರ್ ನಡಿ ಮೂಡಿ ಬರ್ತಿರುವ ಈ ಸಿನಿಮಾಗೆ ಅಶೋಕ್ ವರ್ಧನ್ ಮುಪ್ಪಾ ಮತ್ತು ಸುನಿಲ್ ಬಲುಸು (Sunil Balusu) ಅವರು ಬಂಡವಾಳ ಹೂಡಿದ್ದಾರೆ. ಪ್ರದೀಪ್ ಚಿಲುಕುರಿ (Pradeep Chilukuri) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ.

ನಂದಮೂರಿ ಕಲ್ಯಾಣ್ ರಾಮ್ (Nandamuri Kalyan Ram)  ಸಿನಿಮಾ ಕರಿಯರ್ ನಲ್ಲಿ ಅತಿ ದೊಡ್ಡ ಬಜೆಟ್ ಚಿತ್ರ ಇದಾಗಿದೆ. ಔಟ್-ಅಂಡ್-ಔಟ್ ಆಕ್ಷನ್ ಎಂಟರ್‌ಟೈನರ್ ಕಥಾಹಂದರ ಚಿತ್ರದಲ್ಲಿ ಕಲ್ಯಾಣ್ ರಾಮ್ ಹಿಂದೆಂದೂ ಕಾಣದ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಿಕೃಷ್ಣ ಭಂಡಾರಿ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಇನ್ನುಳಿದ ತಾರಾಗಣ ಮತ್ತು ತಾಂತ್ರಿಕ ಬಳಗವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದಿದ್ದಾರೆ ನಿರ್ದೇಶಕರು.

ಈ ಹಿಂದೆ ಎಟಿಆರ್ ಆರ್ಟ್ಸ್ ಬ್ಯಾನರ್ ನಡಿ ಕಲ್ಯಾಣ್ ರಾಮ್ ನಟಿಸಿದ್ದ ಬಿಂಬಿಸಾರ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಇದೇ ಬ್ಯಾನರ್ ನಡಿ ಯಂಗ್ ಟೈಗರ್ ಎನ್.ಟಿ.ಆರ್ ಹಾಗೂ ಕೊರಟಲಾ ಶಿವ ನಟನೆಯ ದೇವರ ಸಿನಿಮಾ ತಯಾರಾಗುತ್ತಿದ್ದು, ಪ್ರಶಾಂತ್ ನೀಲ್ ಹಾಗೂ ತಾರಕ್ ಚಿತ್ರ ಕೂಡ ಎನ್ ಟಿಆರ್ ಬ್ಯಾನರ್ ನಲ್ಲೇ ಮುಂದೊಂದು ದಿನ ಮೂಡಿ ಬರಲಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್