21 ವರ್ಷಗಳ ಹಿಂದಿನ ದರೋಡೆ ಕೇಸ್‌ – ನಾಮಪತ್ರ ಸಲ್ಲಿಸಿದ ಮರುಕ್ಷಣವೇ ಆರ್‌ಜೆಡಿ ಅಭ್ಯರ್ಥಿ ಅರೆಸ್ಟ್‌

Public TV
1 Min Read

ಪಾಟ್ನಾ/ರಾಂಚಿ: 21 ವರ್ಷಗಳ ಹಿಂದಿನ ದರೋಡೆ ಪ್ರಕರಣಕ್ಕೆ (Robbery Case) ಸಂಬಂಧಿಸಿದಂತೆ ಜಾರ್ಖಂಡ್‌ನ ಗರ್ವಾ ಠಾಣೆಯ ಪೊಲೀಸರು ಸಸಾರಂ ವಿಧಾನಸಭಾ ಕ್ಷೇತ್ರದ ಆರ್‌ಜೆಡಿ (ಸಸಾರಂ ವಿಧಾನಸಭಾ ಕ್ಷೇತ್ರದ) ಅಭ್ಯರ್ಥಿ ಸತ್ಯೇಂದ್ರ ಸಾಹಾ (Satyendra Saha) ಅವರನ್ನ ಬಂಧಿಸಿದ್ದಾರೆ.

ಸತ್ಯೇಂದ್ರ ಸಾಹ ಇಂದು ನಾಮಪತ್ರ (Nomination) ಸಲ್ಲಿಸಲು ಸಸಾರಂ ಉಪವಿಭಾಗ ಕಚೇರಿಗೆ ಆಗಮಿಸಿದ್ದರು. ನಾಮಪತ್ರ ಪ್ರಕ್ರಿಯೆ ಪೂರ್ಣಗೊಂಡ ನಂತರ ಜಾರ್ಖಂಡ್‌ನ ಗರ್ವಾ ಪೊಲೀಸರು 2004ರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಶ್ವತ ವಾರಂಟ್ ಆಧಾರದ ಮೇಲೆ ಬಂಧಿಸಿದ್ದಾರೆ. ಇದು ರಾಜಕೀಯ ಕೋಲಾಹಲಕ್ಕೂ ಕಾರಣವಾಗಿದ್ದು, ಆರ್‌ಜೆಡಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು – 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಆರ್‌ಜೆಡಿ

ಸತ್ಯೇಂದ್ರ ಸಾಹ್ ಕಾರ್ಗಹರ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿದ್ದು, ಅವರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇಂದು 21 ವರ್ಷದ ಹಿಂದಿನ ಪ್ರಕರಣ ಸಂಬಂಧ ಸ್ಥಳೀಯರ ಪೊಲೀಸರ ಜೊತೆಗೂಡಿ ಜಾರ್ಖಂಡ್‌ ಪೊಲೀಸರು ಬಂಧಿಸಿದ್ದಾರೆ. ಸದ್ಯದಲ್ಲೇ ಅವರನ್ನ ಗರ್ವಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಸತ್ಯೇಂದ್ರ ಸಾಹ್ 2010ರ ಚುನಾವಣೆಯಲ್ಲಿ ಕಾಂಗ್ರೆಸ್ (ಜೆ) ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಇದಕ್ಕೂ ಮುನ್ನ ತಮ್ಮ ಪತ್ನಿಯನ್ನ ಸಸಾರಂ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದರು. ಸಾಹ್‌ ಪ್ರಭಾವ ಗಮನಿಸಿದ್ದ ಆರ್‌ಜೆಡಿ ಈ ಬಾರಿ ಹಾಲಿ ಶಾಸಕ ರಾಜೇಶ್ ಗುಪ್ತಾ ಅವರಿಗೆ ಕೊಕ್‌ ನೀಡಿ ಸತ್ಯೇಂದ್ರ ಸಾಹಾ ಅವರನ್ನ ಕಣಕ್ಕಿಳಿಸಿತ್ತು. ಇದನ್ನೂ ಓದಿ: ಜಾತಿ, ಧರ್ಮದ ಹೆಸರಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂ.1 ಇತ್ತು; ಮಂಗಳೂರಲ್ಲಿ ಸಿದ್ರಾಮಯ್ಯ ಭಾಷಣ

ಭಾರೀ ಪೊಲೀಸ್‌ ಭದ್ರತೆ ನಡುವೆ ಬಂಧನ
ನಾಮಪತ್ರ ಸಲ್ಲಿಸಿದ ಬಳಿಕ ಭಾರೀ ಪೊಲೀಸ್‌ ಭದ್ರತೆಯ ನಡುವೆ ಸಾಹಾ ಅವರನ್ನ ಬಂಧಿಸಲಾಗಿದೆ. ಇದರಿಂದ ಆರ್‌ಜೆಡಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಆಡಳಿತ ಪಕ್ಷ ನಡೆಸುತ್ತಿರುವ ರಾಜಕೀಯ ಪಿತೂರಿ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ದೀಪಾವಳಿ ಗಿಫ್ಟ್‌ – ದುಬಾರಿ ಕಾರುಗಳನ್ನೇ ನೀಡಿ ಹೃದಯ ಶ್ರೀಮಂತಿಕೆ ಮೆರೆದ ಉದ್ಯಮಿ

Share This Article