IPL ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಬಾಲಿವುಡ್‌ ತಾರೆಯರು

Public TV
1 Min Read

18ನೇ ಆವೃತ್ತಿಯ ಐಪಿಎಲ್ (IPL 2025) ಶುರುವಿಗೆ ದಿನಗಣನೆ ಶುರುವಾಗಿದೆ. ಇದೇ ಮಾ.22ರಂದು ಐಪಿಎಲ್ 2025ರ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ (Bollywood) ಸ್ಟಾರ್ಸ್ ಸಾಕ್ಷಿಯಾಗಲಿದ್ದಾರೆ. ಶಾರುಖ್ ಖಾನ್, ದಿಶಾ ಪಟಾನಿ, ಗಾಯಕಿ ಶ್ರೇಯಾ ಘೋಷಾಲ್ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.‌

ಐಪಿಎಲ್ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆರ್‌ಸಿಬಿ (RCB) ಮುಖಾಮುಖಿ ಆಗಲಿದೆ. ಕೋಲ್ಕತ್ತ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೇಯಾ ಘೋಷಲ್ ಗಾಯನ, ದಿಶಾ ಪಟಾನಿ (Disha Patani) ಡ್ಯಾನ್ಸ್ ಸೇರಿದಂತೆ ಇತರೆ ಸ್ಟಾರ್‌ಗಳು ಹೆಜ್ಜೆ ಹಾಕಲಿದ್ದಾರೆ.

ಅದಷ್ಟೇ ಅಲ್ಲ, ಕತ್ರಿನಾ ಕೈಫ್, ವರುಣ್ ಧವನ್, ಸಲ್ಮಾನ್ ಖಾನ್, ತೃಪ್ತಿ ದಿಮ್ರಿ, ಅನನ್ಯಾ ಪಾಂಡೆ, ಮಾಧುರಿ ದೀಕ್ಷಿತ್, ಜಾನ್ವಿ ಕಪೂರ್, ವಿಕ್ಕಿ ಕೌಶಲ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಒಟ್ಟು 23 ಕಡೆಗಳಲ್ಲಿ 74 ಮ್ಯಾಚ್‌ಗಳು ನಡೆಯಲಿದ್ದು, ಮೇ 25ರಂದು ಫಿನಾಲೆ ನಡೆಯಲಿದೆ. ಐಪಿಎಲ್ ಶುರುವಿಗೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

Share This Article