2022ರ ಐಪಿಎಲ್‍ನಲ್ಲಿ 10 ತಂಡ ಆಡಿಸಲು ನಿರ್ಧಾರ

Public TV
1 Min Read

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮತ್ತೆ ಎರಡು ತಂಡಗಳು ಸೇರ್ಪಡೆಯಾಗಲಿದೆ. 2022ರ ಐಪಿಎಲ್ ಆವೃತ್ತಿಯಲ್ಲಿ 10 ತಂಡಗಳು ಆಡಲಿವೆ.

ಗುರುವಾರ ಅಹ್ಮದಾಬಾದ್‍ನಲ್ಲಿ ನಡೆದ ಬಿಸಿಸಿಐ 89ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ಹೊಸ ಫ್ರಾಂಚೈಸಿಗಳು ಸೇರಿ ಒಟ್ಟು 10 ತಂಡಗಳಿಗೆ ಅವಕಾಶ ನೀಡಲಾಗಿದೆ. ಪ್ರಸ್ತುತ 8 ಐಪಿಎಲ್ ತಂಡಗಳಿದ್ದು, 2008ರಲ್ಲಿ ಅದೇ ಫ್ರಾಂಚೈಸಿಗಳೊಂದಿಗೆ ಲೀಗ್ ಆರಂಭವಾಗಿದೆ.

2021ರಲ್ಲಿ 10 ತಂಡಗಳು ಆಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಕೋವಿಡ್ 19 ಸೋಂಕು ದೇಶದಲ್ಲಿರುವಾಗ 2 ತಂಡ ಸೇರ್ಪಡೆಯಾದರೆ ಪಂದ್ಯಗಳ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ 2021ರ ಬದಲಿಗೆ 2022ರಲ್ಲಿ 10 ತಂಡ ಆಡಿಸಲು ಬಿಸಿಸಿಐ ಮುಂದಾಗಿದೆ. ಮುಂದಿನ ವರ್ಷದ ಏಪ್ರಿಲ್, ಮೇ ತಿಂಗಳಿನಲ್ಲಿ ಭಾರತದಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ.

ಈ ಹಿಂದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ನಾಯಕ ರಾಹುಲ್ ದ್ರಾವಿಡ್, ಐಪಿಎಲ್ ವಿಸ್ತರಿಸಲು ಇದು ಸರಿಯಾದ ಸಮಯ. ಟೂರ್ನಿಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ದೇಶದಲ್ಲಿ ಲಭ್ಯವಿರೋ ಉತ್ತಮ ಗುಣಮಟ್ಟದ ಮತ್ತು ಯುವ ಪ್ರತಿಭೆಗಳ ಬಳಸಿಕೊಂಡು ಟೂರ್ನಿಯನ್ನು ವಿಸ್ತರಿಸಬಹುದಾಗಿದೆ ಎಂದು ಹೇಳಿದ್ದರು.

ಸಾಮಥ್ರ್ಯವಿರುವ ಸಾಕಷ್ಟು ಕ್ರಿಕೆಟ್ ಆಟಗಾರರು ಈ ವೇದಿಕೆ ಮೇಲೆ ಆಡುವ ಅವಕಾಶ ಲಭಿಸಿಲ್ಲ. ಆದ್ದರಿಂದ ತಂಡಗಳ ಸಂಖ್ಯೆಯನ್ನು ಹೆಚ್ಚು ಮಾಡಿದರೆ ಮತ್ತಷ್ಟು ಆಟಗಾರರಿಗೆ ಅವಕಾಶ ಲಭಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *