2021 ಇಸುಜು ಡಿ-ಮ್ಯಾಕ್ಸ್ ಹೈಲ್ಯಾಂಡರ್, ವಿ-ಕ್ರಾಸ್ ಎಸ್‌ಯುವಿ ಬಿಡುಗಡೆ

Public TV
3 Min Read

2021 ಇಸುಜು ಡಿ-ಮ್ಯಾಕ್ಸ್ ಪಿಕ್ ಅಪ್ ಮತ್ತು ಎಂಯು-ಎಕ್ಸ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆಯಾಗಿದ್ದು, ಇವುಗಳ ಬೆಲೆ ಕ್ರಮವಾಗಿ 16.98 ಲಕ್ಷ ಮತ್ತು 32.23 ಲಕ್ಷ ರೂ. (ಎಕ್ಸ್ ಶೋ ರೂಂ, ತಮಿಳುನಾಡು) ಗಳಿಂದ ಶುರುವಾಗುತ್ತದೆ.

ಈ ಎರಡೂ ಮಾದರಿಗಳನ್ನು ಬಿಎಸ್ 6 ಯುಗಾರಂಭವಾದ ನಂತರ ಏಪ್ರಿಲ್ 2020ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಪುನಃ ಎರಡೂ ಮಾದರಿಗಳನ್ನು ಪರಿಚಯಿಸಲಾಗಿದೆ. ನೆಕ್ಸ್ಟ್ ಜೆನ್ ಎಂಯು-ಎಕ್ಸ್ ಮತ್ತು ಡಿ-ಮ್ಯಾಕ್ಸ್ ಅನ್ನು ವಿದೇಶದಲ್ಲಿ ಪರಿಚಯಿಸಲಾಗಿದ್ದರೂ, ಹಿಂದಿನ ತಲೆಮಾರಿನ ಮಾದರಿಗಳೊಂದಿಗೆ ಭಾರತದಲ್ಲೂ ಮುಂದುವರಿಯಲು ಇಸುಜು ಇಂಡಿಯಾ ನಿರ್ಧರಿಸಿದೆ.

2021 ಇಸುಜು ಡಿ-ಮ್ಯಾಕ್ಸ್ ಹೈಲ್ಯಾಂಡರ್, ವಿ-ಕ್ರಾಸ್ Z ಮತ್ತು ವಿ-ಕ್ರಾಸ್ Z ಪ್ರೆಸ್ಟೀಜ್ ರೂಪಾಂತರಗಳಲ್ಲಿ ಲಭ್ಯವಿದೆ. ಎಲ್ಲವೂ ಬಿಎಸ್ 6-ಕಂಪ್ಲೈಂಟ್ 163 ಎಚ್‌ಪಿ, 1.9-ಲೀಟರ್ ಡೀಸೆಲ್ ಎಂಜಿನ್‌ ಹೊಂದಿವೆ.2021 ಇಸುಜು ಎಂಯು-ಎಕ್ಸ್ 4×2 ಮತ್ತು 4×4 ಮಾದರಿಗಳಲ್ಲಿ ಲಭ್ಯವಿದೆ. ಎರಡೂ ಎಂಯು-ಎಕ್ಸ್ ಮಾಡೆಲ್ ಗಳು ಬಿಎಸ್ 6-ಕಂಪ್ಲೈಂಟ್ 163 ಹೆಚ್‌ಪಿ, 1.9-ಲೀಟರ್ ಡೀಸೆಲ್ ಎಂಜಿನ್ ಪಡೆಯುತ್ತವೆ.

2021 ಇಸುಜು ಡಿ-ಮ್ಯಾಕ್ಸ್ ಬೆಲೆ 16.98-24.49 ಲಕ್ಷ ರೂ.
ಇಸುಜು ನವೀಕರಿಸಿದ ಪಿಕ್-ಅಪ್ ಅನ್ನು ಮೂರು ವೇರಿಯಂಟ್ ಗಳಲ್ಲಿ ಪರಿಚಯಿಸಿದೆ – ಹೈ-ಲ್ಯಾಂಡರ್, ವಿ-ಕ್ರಾಸ್ Z ಮತ್ತು ವಿ-ಕ್ರಾಸ್ Z ಪ್ರೆಸ್ಟೀಜ್. ಇವುಗಳಲ್ಲಿ 1.9-ಲೀಟರ್, ನಾಲ್ಕು ಸಿಲಿಂಡರ್ ಟರ್ಬೊ ಬಿಎಸ್BS6 ಡೀಸಲ್ ಎಂಜಿನ್ ಇದ್ದು 163hp ಶಕ್ತಿ ಮತ್ತು 360Nm ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಈ ಹಿಂದೆ ಲಭ್ಯವಿದ್ದ BS4 ಎಂಜಿನಿಗಿಂತ ಇದು 13hp ಮತ್ತು 10Nm ಹೆಚ್ಚು ಶಕ್ತಿಯುತವಾಗಿದೆ.

ಹೈಲ್ಯಾಂಡರ್ ವೇರಿಯಂಟ್ ಮತ್ತು ವಿ-ಕ್ರಾಸ್ ಟ್ರಿಮ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ, ಹೈಲ್ಯಾಂಡರ್ ಕೇವಲ 2 ವೀಲ್ ಡ್ರೈವ್ ರೂಪದಲ್ಲಿ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ವಿ-ಕ್ರಾಸ್ ವೇರಿಯಂಟ್ಸ್ 4 ವೀಲ್ ಡ್ರೈವ್ ಸಿಸ್ಟಮ್ ಮತ್ತು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಪಡೆಯುತ್ತವೆ.

ಹೊಸ ಹೈ-ಲ್ಯಾಂಡರ್ ವೇರಿಯಂಟ್ (ರೂ. 16.98 ಲಕ್ಷ) ಎರಡು ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಹಿಂಬದಿ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ISOFIX ಆಂಕರ್‌ಗಳು ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಇದು 16 ಇಂಚಿನ ಚಕ್ರಗಳನ್ನು ವೀಲ್ ಕವರ್‌ಗಳೊಂದಿಗೆ ಹೊಂದಿದೆ, ಡ್ರೈವರ್ ಸೀಟ್ ಹೊಂದಾಣಿಕೆ ಆಯ್ಕೆಯೂ ಇದ್ದು, ಹಿಂದಿನ ಸೀಟುಗಳು 60:40 ಅನುಪಾತದಲ್ಲಿ ವಿಭಜನೆಯಾಗುತ್ತವೆ. ಹೊಸ ಡಿಜಿಟಲ್ ಕಲರ್ ಎಂಐಡಿ ಅನಲಾಗ್ ಡಯಲ್‌ಗಳ ನಡುವೆ ಇರಲಿದ್ದು, ಯುಎಸ್‌ಬಿ ಪೋರ್ಟ್‌ಗಳು, ಪವರ್ ವಿಂಡೋಸ್ ಮತ್ತು ಮ್ಯಾನ್ಯುಯಲ್ ಎಸಿ ಈ ಅವತರಣಿಕೆಯಲ್ಲಿ ಲಭ್ಯವಿರುತ್ತದೆ.

ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ Z ಟ್ರಿಮ್ (ರೂ. 19.98-20.98 ಲಕ್ಷ)ನಲ್ಲಿ ಆಟೋ-ಲೆವೆಲಿಂಗ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್, 18 ಇಂಚಿನ ಅಲಾಯ್ ವೀಲ್, ಕೀಲೆಸ್ ಎಂಟ್ರಿ ಅಂಡ್ ಗೋ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 7.0 ಇಂಚಿನ ಇನ್ಫೋಟೈನ್ಮೆಂಟ್ ಟಚ್ಸ್ಕ್ರೀನ್ ವಿಥ್ ಯುಎಸ್‌‍ಬಿ, ಬ್ಲೂಟೂತ್, ಆಕ್ಸ್-ಇನ್ ಮತ್ತು ಡಿವಿಡಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೊಲ್ಸ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಇದೆ.

ವಿ-ಕ್ರಾಸ್ Z ಪ್ರೆಸ್ಟೀಜ್ (ರೂ. 24.49 ಲಕ್ಷ) ವೆರಿಯಂಟ್ನಲ್ಲಿ ವಿ-ಕ್ರಾಸ್ Z ಟ್ರಿಮ್ನಲ್ಲಿ ಲಭ್ಯವಿರುವ ಎಲ್ಲ ವೈಶಿಷ್ಟ್ಯಗಳ ಜೊತೆ ಹೆಚ್ಚಿವರಿಯಾಗಿ ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್, ಇಎಸ್‌ಸಿ, ಟ್ರಾಕ್ಷನ್ ಕಂಟ್ರೋಲ್, ಹಿಲ್-ಡಿಸೆಂಟ್ ಅಸಿಸ್ಟ್, ಶಿಫ್ಟ್-ಆನ್-ಫ್ಲೈ 4 ವೀಲ್ ಡ್ರೈವ್, ಲೆದರ್ ಸೀಟುಗಳು, 8-ಸ್ಪೀಕರ್ ಸೌಂಡ್ ಸಿಸ್ಟಮ್, ಪವರ್ಡ್ ಡ್ರೈವರ್ ಸೀಟ್ ಮತ್ತು ಆಟೋ ಕ್ರೂಸ್ ಕಂಟ್ರೋಲ್ ಇರಲಿವೆ.

2021 ಇಸುಜು ಎಂಯು-ಎಕ್ಸ್ ಬೆಲೆ 33.23-35.19 ಲಕ್ಷ
ಮೊದಲಿನಂತೆ, ಎಂಯು-ಎಕ್ಸ್ ಅದೇ 163 ಹೆಚ್‌ಪಿ, 1.9-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿದೆ, ಇದನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. 4×2 (ರೂ. 33.23 ಲಕ್ಷ) ಮತ್ತು 4×4 ರೂಪಾಂತರಗಳನ್ನು (ರೂ. 35.19 ಲಕ್ಷ) ಉಳಿಸಿಕೊಳ್ಳಲಾಗಿದೆ. ಶಿಫ್ಟ್-ಬೈ-ವೈರ್ 4 ಡಬ್ಲ್ಯೂಡಿ ವ್ಯವಸ್ಥೆಯ ಕೊರತೆಯ ಹೊರತಾಗಿ, ವೆರಿಯಂಟ್ಗಳು ಒಂದೇ ಆಗಿರುತ್ತವೆ ಮತ್ತು ಒಂದೇ ರೀತಿಯ ವೈಶಿಷ್ಟ್ಯಗಳನ್ನು ಪಡೆಯುತ್ತವೆ – ಆರು ಏರ್‌ಬ್ಯಾಗ್, ಹಿಂಬದಿ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಹಿಂಬದಿಯ ಕ್ಯಾಮೆರಾ, ಎಲ್‌ಇಡಿ ಹೆಡ್‌ಲೈಟ್‌ಗಳು, ಪವರ್ ಅಡ್ಜಸ್ಟ್ಅಬಲ್ ಡ್ರೈವರ್ ಸೀಟ್, ಪವರ್ಡ್ ಸ್ಪ್ಲಿಟ್-ಫೋಲ್ಡಿಂಗ್ ಎರಡನೇ ಮತ್ತು ಮೂರನೇ ಸಾಲಿನ ಆಸನಗಳು, 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಕ್ರೂಸ್ ಕಂಟ್ರೋಲ್.

ಇಸುಜು ಎಂಯು-ಎಕ್ಸ್ ಎಂಜಿ ಗ್ಲೋಸ್ಟರ್ (ರೂ. 29.98-36.88 ಲಕ್ಷ *), ಫೋರ್ಡ್ ಎಂಡೇವರ್ (29.99-36.25 ಲಕ್ಷ ರೂ.), ಟೊಯೋಟಾ ಫಾರ್ಚೂನರ್ ಮತ್ತು ಲೆಜೆಂಡರ್ (30.34-38.30 ಲಕ್ಷ ರೂ.) ಮತ್ತು ಮಹೀಂದ್ರಾ ಆಲ್ಟುರಾಸ್ ಜಿ4 (28.74-31.74 ಲಕ್ಷ ರೂ.) ಕಾರುಗಳೊಂದಿಗೆ ಸ್ಪರ್ಧಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *