2020ನೇ ಸಾಲಿನ ರಾಜ್ಯ ಪ್ರಶಸ್ತಿ ಪ್ರಕಟ – ʻಜಂಟಲ್‍ಮನ್ʼ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ!

Public TV
1 Min Read

ಬೆಂಗಳೂರು: 2020ನೇ ಸಾಲಿನ ರಾಜ್ಯ ಪ್ರಶಸ್ತಿ ಪ್ರಕಟವಾಗಿದ್ದು, ʻಪಿಂಕಿ ಎಲ್ಲಿʼ ಸಿನಿಮಾ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. 2ನೇ ಮತ್ತು 3ನೇ ಅತ್ಯುತ್ತಮ ಸಿನಿಮಾಗಳಾಗಿ ʻವರ್ಣಪಟಲʼ ಮತ್ತು ʻಹರಿವ ನದಿಗೆ ಮೈಯೆಲ್ಲಾ ಕಾಲುʼ ಚಿತ್ರಗಳು ಆಯ್ಕೆಯಾಗಿವೆ.

ಇನ್ನೂ ಅತ್ಯುತ್ತಮ ನಟನಾಗಿ ಪ್ರಜ್ವಲ್ ದೇವರಾಜ್ (Prajwal Devaraj) (ಜಂಟಲ್ ಮನ್), ಅತ್ಯುತ್ತಮ ನಟಿಯಾಗಿ ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ) ಮತ್ತು ಅತ್ಯುತ್ತಮ ಪೋಷಕ ನಟರಾಗಿ ರಮೇಶ್ ಪಂಡಿತ್ (ತಲೆದಂಡ) ಹಾಗೂ ಅತ್ಯುತ್ತಮ ಪೋಷಕ ನಟಿಯಾಗಿ ಕೆ.ಎಸ್.ಮಂಜುಳಮ್ಮ (ದಂತಪುರಾಣ) ಆಯ್ಕೆಯಾಗಿದ್ದಾರೆ.

ಅಚ್ಯುತ್ ಕುಮಾ‌ರ್ ನಟನೆಯ ‘ಫೋರ್ ವಾಲ್ಸ್’ 2020ನೇ ಸಾಲಿನ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಈ ಚಿತ್ರವನ್ನು ಟಿ.ವಿಶ್ವನಾಥ ನಾಯಕ ಅವರು ನಿರ್ಮಿಸಿದ್ದಾರೆ. ಸಂಗಮೇಶ್ ಎಸ್. ಸಜ್ಜನರ್ ನಿರ್ದೇಶಿಸಿದ್ದಾರೆ. ಈ ಪ್ರಶಸ್ತಿ 50 ಸಾವಿರ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ.

ಯಾರಿಗೆಲ್ಲ ಪ್ರಶಸ್ತಿ?
ಅತ್ಯುತ್ತಮ ನಟ : ಪ್ರಜ್ವಲ್ ದೇವರಾಜ್, ಜಂಟಲ್ ಮ್ಯಾನ್
ಅತ್ಯುತ್ತಮ ನಟಿ : ಅಕ್ಷತಾ ಪಾಂಡವಪುರ, ಪಿಂಕಿ ಎಲ್ಲಿ
ಅತ್ಯುತ್ತಮ ಮೊದಲ ಚಿತ್ರ: ಪಿಂಕಿ ಎಲ್ಲಿ, ಪೃಥ್ವಿ ಕೊಣನೂರು ನಿರ್ದೇಶಕ
ಎರಡನೇ ಅತ್ಯುತ್ತಮ ಸಿನಿಮಾ : ವರ್ಣಪಟಲ, ಚೇತನ್ ಮುಂಡಾಡಿ ನಿರ್ದೇಶನ
ಮೂರನೇ ಅತ್ಯುತ್ತಮ ಸಿನಿಮಾ : ಹರಿವ ನದಿಗೆ ಮೈಯೆಲ್ಲ ಕಾಲು
ಅತ್ಯುತ್ತಮ ಮಕ್ಕಳ ಚಿತ್ರ : ಪದಕ
ಅತ್ತ್ಯುತ್ತಮ ಪೋಷಕ ನಟ ರಮೇಶ್ ಪಂಡಿತ್ ಸಿನಿಮಾ ʻತಲೆ ದಂಡʼ
ಅತ್ತ್ಯುತ್ತಮ ಪೋಷಕ ನಟಿ. ಮಂಜುಳಮ್ಮ ಸಿನಿಮಾ ʻದಂತ ಪುರಾಣʼ

Share This Article