2 ದಿನದಲ್ಲೇ 500 ಕೋಟಿ ರೂ. ಮೌಲ್ಯದ ಒನ್‍ಪ್ಲಸ್ ಸ್ಮಾರ್ಟ್ ಫೋನ್, ಟಿವಿ ಮಾರಿದ ಅಮೆಜಾನ್

Public TV
2 Min Read

ನವದೆಹಲಿ: ಗ್ರೇಟ್ ಇಂಡಿಯನ್ ಫೆಸ್ಟಿವಲ್‍ನಲ್ಲಿ ಚೀನಾ ಮೂಲದ ಒನ್‍ಪ್ಲಸ್ ಸ್ಮಾರ್ಟ್ ಫೋನ್ ಹಾಗೂ ಒನ್‍ಪ್ಲಸ್ ಟಿವಿಗಳು ಭರ್ಜರಿ ಮಾರಾಟವಾಗಿವೆ. ಫೆಸ್ಟಿವಲ್ ವಿಶೇಷ ಆಫರ್ ಆರಂಭವಾದ ಕೇವಲ ಎರಡೇ ದಿನಗಳಲ್ಲಿ ಅಮೆಜಾನ್ 500 ಕೋಟಿ ರೂ. ಮೌಲ್ಯದ ಒನ್‍ಪ್ಲಸ್ ಉತ್ಪನ್ನಗಳನ್ನು ಮಾರಾಟ ಮಾಡಿದೆ.

ಇತ್ತೀಚೆಗೆ ಮಾರುಕಟ್ಟೆಗೆ ಕಾಲಿಟ್ಟ 37,999 ರೂ. ಬೆಲೆಯ ಒನ್ ಪ್ಲಸ್ 7ಟಿ ಹಾಗೂ 69,900 ರೂ. ಮೌಲ್ಯದ ಒನ್ ಪ್ಲಸ್ ಟಿವಿ 55 ಕ್ಯೂ1 ಪ್ರೀಮಿಯಂ ಸ್ಮಾರ್ಟ್ ಫೋನ್ ಮತ್ತು ಟಿವಿ ವಿಭಾಗಗಳಲ್ಲಿ ಕ್ರಮವಾಗಿ ಅತಿ ಹೆಚ್ಚು ಮಾರಾಟವನ್ನು ದಾಖಲಿಸಿವೆ.

ನಮ್ಮ ಸಂಸ್ಥೆಯು ಗ್ರಾಹಕರ ಬಳಕೆಗೆ ಸೂಕ್ತವಾಗುವ ಉತ್ತಮ ವಿನ್ಯಾಸ ಹೊಂದಿರುವ ಉತ್ಪನ್ನಗಳನ್ನು ತಯಾರಿಸುತ್ತಿದೆ. ಈ ನಿಟ್ಟಿನಲ್ಲಿ ಒನ್‍ಪ್ಲಸ್ 7ಟಿ ಹಾಗೂ ಒನ್‍ಪ್ಲಸ್ ಟಿವಿ ಗಳನ್ನು ಸಿದ್ಧಪಡಿಸಿದೆ ಎಂದು ಒನ್‍ಪ್ಲಸ್‍ನ ಭಾರತದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್ವಾಲ್ ತಿಳಿಸಿದ್ದಾರೆ.

ಒನ್‍ಪ್ಲಸ್ ಟಿವಿ 55ಕ್ಯೂ1 ಪ್ರೊ 99,900 ರೂ. ಹಾಗೂ ಒನ್‍ಪ್ಲಸ್ ಟಿವಿ 55ಕ್ಯೂ1 69,900 ರೂ.ಗೆ ಲಭ್ಯವಾಗಲಿವೆ. ಈ ಟಿವಿಗಳು ಅತ್ಯಾಧುನಿಕ 4ಕೆ ಕ್ಯೂಎಲ್‍ಇಡಿ ಡಿಸ್‍ಪ್ಲೇ, 10 ಎಚ್‍ಡಿಆರ್ (ಹೈ ಡೈನಾಮಿಕ್ ರೇಂಜ್), 50 ವ್ಯಾಟ್‍ನ ಎಂಟು ಸ್ಪೀಕರ್, ಡಾಲ್ಬಿ ಅಟ್ಮೋಸ್ ಹೊಂದಿವೆ.

ಒನ್‍ಪ್ಲಸ್ 7ಟಿ ಗ್ಲೇಸಿಯರ್ ಬ್ಲೂ ( 8 ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೋರಿ) ಅಂದಾಜು ಬೆಲೆ 37,999 ರೂ., ಒನ್‍ಪ್ಲಸ್ 7ಟಿ ಗ್ಲೇಸಿಯರ್ ಬ್ಲೂ (8 ಜಿಬಿ ರ‍್ಯಾಮ್, 256 ಜಿಬಿ ಆಂತರಿಕ ಮೆಮೋರಿ) ಬೆಲೆ 39,999 ರೂ., ಹಾಗೂ ಒನ್‍ಪ್ಲಸ್ 7ಟಿ ಸಿಲ್ವರ್ (8ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೋರಿ) ಫೋನಿಗೆ 37,999 ರೂ.ನಿಗದಿಯಾಗಿದೆ.

ಒನ್‍ಪ್ಲಸ್, 7 ಸರಣಿಯಲ್ಲಿ ಹೊಸ ಒನ್‍ಪ್ಲಸ್ 7ಟಿ ಸ್ಮಾರ್ಟ್ ಫೋನ್ ಅನ್ನು ಸೆಪ್ಟೆಂಬರ್ 26ರಂದು ದೇಶದ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ವರ್ಷ ಒನ್‍ಪ್ಲಸ್‍ನ ಎರಡನೇ ಮೊಬೈಲ್ ಇದಾಗಿದ್ದು ಜತೆಗೆ ಅತ್ಯಂತ ತೆಳು ಮತ್ತು ಹಗುರ ವಿನ್ಯಾಸ ಹೊಂದಿದೆ.

ಒನ್‍ಪ್ಲಸ್ 7ಟಿ ಗ್ಲೇಸಿಯರ್ ಬ್ಲೂ ಮತ್ತು ಫ್ರೊಸ್ಟೆಡ್ ಸಿಲ್ವರ್ ಬಣ್ಣದಲ್ಲಿ ದೊರೆಯುತ್ತಿದೆ. ಈ ಫೋನ್ 6.55 ಇಂಚಿನ ಅಮೊಲೆಡ್ 90 ಹಜ್ರ್ಟ್ ಡಿಸ್‍ಪ್ಲೇ ಹೊಂದಿದೆ. ಒನ್‍ಪ್ಲಸ್ ಈವರೆಗೆ ಪರಿಚಯಿಸಿರುವ ಫೋನ್‍ಗಳಲ್ಲೇ ವಿಶೇಷವೆನಿಸಿಕೊಂಡಿರುವ ಆಕರ್ಷಕ ಡಿಸ್‍ಪ್ಲೇ ಇದಾಗಿದ್ದು, ಈ ಸರಣಿಯಲ್ಲಿ ಫ್ಲ್ಯೂಡ್ ಡಿಸ್‍ಪ್ಲೇ ಹೊಂದಿರುವ ಮೊದಲ ಫೋನ್ ಆಗಿದೆ.

ಒನ್‍ಪ್ಲಸ್ 7ಟಿ ಹಿಂಬದಿಯಲ್ಲಿ ವೃತ್ತಾಕಾರದ ಆಕರ್ಷಕ ತ್ರಿವಳಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಅಲ್ಲದೆ ಕ್ಯಾಮೆರಾ ರಚನೆಯಲ್ಲಿ ಮರುವಿನ್ಯಾಸ ಮಾಡಿರುವುದಾಗಿ ಹೇಳಿದೆ. ಒನ್‍ಪ್ಲಸ್, ಫೋಟೋ ಮಾತ್ರವಲ್ಲದೆ, ವಿಡಿಯೋ ಚಿತ್ರೀಕರಣವನ್ನು ಕೂಡ ಸೂಪರ್ ಸ್ಟೇಬಲ್ ಆಗಿಸಿದ್ದು, ಚಲನೆಯಲ್ಲಿ ವಿಡಿಯೋ ಮಾಡುತ್ತಿರುವಾಗ ಯಾವುದೇ ಅಲುಗಾಟವಿಲ್ಲದ ವಿಡಿಯೋ ಚಿತ್ರೀಕರಿಸಲು ಸಾಧ್ಯವಾಗುತ್ತದೆ. 48 ಮೆಗಾಪಿಕ್ಸೆಲ್‍ನ ಪ್ರಮುಖ ಲೆನ್ಸ್ ಜೊತೆಗೆ 16 ಎಂಪಿ ವೈಡ್ ಮತ್ತು ಅಲ್ಟ್ರಾವೈಡ್‍ಗಾಗಿ ಎರಡು ಇತರ ಲೆನ್ಸ್ ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *