ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಯಾರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ?

Public TV
1 Min Read

ನವದೆಹಲಿ: ಮತ್ತೆ ಅಧಿಕಾರದ ಗದ್ದುಗೆ ಏರಲು ಪ್ರಯತ್ನಿಸುತ್ತಿರುವ ಬಿಜೆಪಿ 184 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕರ್ನಾಟಕದ ಹಾಲಿ ಬಹುತೇಕ ಸಂಸದರಿಗೆ ಟಿಕೆಟ್ ನೀಡಲಾಗಿದ್ದು 21 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.

ದೆಹಲಿಯ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಮೊದಲ ಪಟ್ಟಿಯಲ್ಲಿ ಹಿರಿಯ ನಾಯಕ ಎಲ್‍ಕೆ ಅಡ್ವಾಣಿಗೆ ಸ್ಥಾನ ಸಿಕ್ಕಿಲ್ಲ. ಅಡ್ವಾಣಿ ಕ್ಷೇತ್ರವಾದ ಗುಜರಾತಿನ ಗಾಂಧಿನಗರದಿಂದ ಅಮಿತ್ ಶಾ ಸ್ಪರ್ಧಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿ, ರಾಜನಾಥ್ ಸಿಂಗ್ ಲಕ್ನೋ, ನಿತಿನ್ ಗಡ್ಕರಿ ನಾಗ್ಪುರದಿಂದ ಸ್ಪರ್ಧಿಸಲಿದ್ದಾರೆ. ವಿಕೆ ಸಿಂಗ್ ಗಾಜಿಯಾಬಾದ್, ಹೇಮಮಾಲಿನಿ ಮಥುರಾ, ಸಾಕ್ಷಿ ಮಹರಾಜ್ ಉನ್ನಾವೋ, ಸ್ಮೃತಿ  ಇರಾನಿ ಅಮೇಠಿಯಿಂದ ಸ್ಪರ್ಧಿಸಲಿದ್ದಾರೆ.

ಚಿಕ್ಕೋಡಿ, ಬೆಂಗಳೂರು ದಕ್ಷಿಣ, ಕೋಲಾರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಯಚೂರು, ಕೊಪ್ಪಳ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಇಂದಿನ ಪಟ್ಟಿಯಲ್ಲಿ ಪ್ರಕಟಿಸಿಲ್ಲ.

ಕರ್ನಾಟಕದಲ್ಲಿ ಯಾರು ಯಾವ ಕ್ಷೇತ್ರ?:
ಬೆಳಗಾವಿ – ಸುರೇಶ್ ಅಂಗಡಿ
ಕಲಬರುಗಿ- ಉಮೇಶ್ ಜಾದವ್
ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್

ಧಾರವಾಡ – ಪ್ರಹ್ಲಾದ್ ಜೋಷಿ
ಹಾವೇರಿ- ಶಿವಕುಮಾರ್ ಉದಾಸಿ
ಬಳ್ಳಾರಿ – ದೇವೇಂದ್ರಪ್ಪ

ಮೈಸೂರು- ಪ್ರತಾಪ್ ಸಿಂಹ
ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್
ಹಾಸನ- ಎ ಮಂಜು
ಉಡುಪಿ- ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ
ಉತ್ತರಕನ್ನಡ -ಅನಂತ್ ಕುಮಾರ್ ಹೆಗ್ಡೆ

ಬೀದರ್ – ಭಗವಂತ ಖೂಬಾ
ಕಲಬುರಗಿ- ಉಮೇಶ್ ಜಾಧವ್
ಚಿತ್ರದುರ್ಗ – ನಾರಾಯಣಸ್ವಾಮಿ
ಶಿವಮೊಗ್ಗ- ಬಿ.ವೈ ರಾಘವೇಂದ್ರ
ತುಮಕೂರು- ಜಿಎಸ್ ಬಸವರಾಜ್

ಬೆಂಗಳೂರು ಕೇಂದ್ರ- ಪಿಸಿ ಮೋಹನ್
ಬೆಂಗಳೂರು ಉತ್ತರ – ಸದಾನಂದ ಗೌಡ
ಚಿಕ್ಕಾಬಳ್ಳಾಪುರ- ಬಚ್ಚೇಗೌಡ
ಚಾಮರಾಜನಗರ – ಶ್ರೀನಿವಾಸ ಪ್ರಸಾದ್

Share This Article
Leave a Comment

Leave a Reply

Your email address will not be published. Required fields are marked *