ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ – 200 ಮನೆಗಳು ನೆಲಸಮ

1 Min Read

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ (JCB_ ಘರ್ಜನೆ ಮಾಡಿದೆ. ಪಾಲಿಕೆ ಜಾಗವನ್ನ ಒತ್ತುವರಿ (Encroachment) ಮಾಡಿಕೊಂಡು ನಿರ್ಮಿಸಿದ್ದ 200 ಮನೆಗಳನ್ನ ಜೆಸಿಬಿಗಳ ಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

6 ಜೆಸಿಬಿ, 300 ಪೊಲೀಸ್‌ ಸಿಬ್ಬಂದಿಯ ಬಿಗಿ ಭದ್ರತೆಯಲ್ಲಿ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲೆಗೆ ಕಳಪೆ ಆಹಾರ ಧಾನ್ಯ ಪೂರೈಕೆ – ಅಕ್ಕಿ, ಗೋಧಿ, ತೊಗರಿಯಲ್ಲಿ ಬರೀ ಹುಳು, ಕಸ ಪತ್ತೆ!

ಕಾರಣ ಏನು?
ಶ್ರೀನಿವಾಸಪುರದ ಕೋಗಿಲು ಲೇಔಟ್‌ನಲ್ಲಿರುವ ಈ ಗೋಮಾಳ ಜಾಗವನ್ನ ಜಿಲ್ಲಾಡಳಿತ ನಗರ ಪಾಲಿಕೆಗೆ ನೀಡಿತ್ತು. ಆದ್ರೆ ಜಾಗವನ್ನ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆ ನಿರ್ಮಿಸಲಾಗಿತ್ತು. ಹೀಗಾಗಿ ಒತ್ತುವರಿ ಮಾಡಿ ನಿರ್ಮಿಸಲಾಗಿರುವ 200 ಮನೆಗಳನ್ನ ನೆಲಸಮಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ವದಂತಿ – ಬೇಕರಿ, ಕಾಂಡಿಮೆಂಟ್ಸ್‌ ವ್ಯಾಪಾರ ಕುಸಿತ!

Share This Article