ವರದಕ್ಷಿಣೆಗಾಗಿ 4 ತಿಂಗಳ ಮಗುವಿನ ತಾಯಿ ಬಲಿ

Public TV
1 Min Read

ಚಿಕ್ಕೋಡಿ/ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮದಲ್ಲಿ ವರದಕ್ಷಿಣೆಗಾಗಿ ಮಹಿಳೆಯನ್ನು ಬರ್ಬರ ಹತ್ಯೆ ಮಾಡಿರುವ ಆರೋಪ ಕೇಳಿ ಬರುತ್ತಿದೆ.

ಮಹಾದೇವಿ ಸಂಜು ಮಾದರ(20) ಕೊಲೆಯಾದ ಮಹಿಳೆ. ಈ ಘಟನೆ ಯಲ್ಲಮ್ಮವಾಡಿ ಗ್ರಾಮದ ಡಂಡಿ ತೋಟದ ವಸತಿಯಲ್ಲಿ ನಡೆದಿದೆ. ಕಳೆದ 17 ತಿಂಗಳ ಹಿಂದೆ ಸಂಜು ಮಾದರ್ ಜೊತೆ ಮೃತ ಮಹಾದೇವಿ ಮದುವೆಯಾಗಿದ್ದಳು. ಈ ದಂಪತಿಗೆ ಸಾನ್ವಿ 8 ತಿಂಗಳ ಮಗು ಇದೆ.

ವರದಕ್ಷಿಣೆಗಾಗಿ ಅತ್ತೆ, ಮಾವ, ಗಂಡ ಮತ್ತು ಮೈದುನ ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತ ಮಹಾದೇವಿ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *