1 ವರ್ಷದ ಹಿಂದೆ ಲವ್ ಮ್ಯಾರೇಜ್- ರಾತ್ರಿ ರೂಮಿನಲ್ಲಿ ಒಬ್ಬಳೇ ಇದ್ದ ಸೊಸೆ ಮೇಲೆರಗಿದ ಮಾವ!

Public TV
2 Min Read

ಕಾರವಾರ: ಮಾವನಿಂದಲೇ ಸೊಸೆ ಅತ್ಯಾಚಾರಕ್ಕೊಳಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ನಡೆದಿದೆ.

ಹಿಲ್ಲೂರು ಗ್ರಾಮದ 20 ವರ್ಷದ ವಿವಾಹಿತೆ ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾದ ಸಂತ್ರಸ್ತೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತಿಯ ತಂದೆ ಬ್ರಹ್ಮ ಹರಿಕಂತ್ರ(50) ಈಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದರಿಂದಾಗಿ ಮನನೊಂದು ಖಿನ್ನತೆಗೊಳಗಾಗಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಏನಿದು ಪ್ರಕರಣ?:
ಒಂದು ವರ್ಷದ ಹಿಂದೆ ಮೃತ ಸಂತ್ರಸ್ತೆ ಕುಮಟಾ ತಾಲೂಕಿನ ಹಿರೇಗುತ್ತಿ ಸಮೀಪದ ನವಗ್ರಹ ಗ್ರಾಮದ ಶಿವು (25)ನೊಂದಿಗೆ ಪ್ರೇಮ ವಿವಾಹವಾಗಿದ್ದರು. ಬಳಿಕ ಮದುವೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಮೀನುಗಾರಿಕೆ ನಡೆಸಲು ಪತಿಯು ಬೋಟಿಗೆ ಹೊರ ಹೋಗುತ್ತಿದ್ದನು. ಅತ್ತೆ ಕೂಡ ಕೆಲಸಕ್ಕೆ ಹೊರ ಹೋಗುತ್ತಿರಿಂದ ಮನೆಯಲ್ಲಿ ಒಬ್ಬಳೇ ಇರುತ್ತಿದ್ದರು. ಹೀಗೆ ಸೊಸೆ ಒಬ್ಬಳೆ ಇರುತ್ತಿದ್ದ ಕಾರಣ ತಾನೂ ಕೂಡ ಕೆಲಸಕ್ಕೆ ತೆರಳದೇ ಸೊಸೆ ಒಂಟಿಯಾಗಿದ್ದ ಸಂದರ್ಭವನ್ನು ಬಳಸಿಕೊಂಡು ಮಾವ ಬ್ರಹ್ಮ, ಈಕೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಅಷ್ಟೇ ಅಲ್ಲದೇ ತನ್ನೊಂದಿಗೆ ಸಹಕರಿಸುವಂತೆ ಒತ್ತಾಯಿಸಿದ್ದನು. ಆದರೆ ಸೊಸೆ ಇದನ್ನು ತಿರಸ್ಕರಿಸಿ ಪ್ರತಿಭಟಿಸಿದ್ದರು.

ಈ ವಿಷಯವನ್ನ ತನ್ನ ಪತಿ, ಅತ್ತೆಗಾಗಲಿ ಹೆದರಿ ತಿಳಿಸಿರಲಿಲ್ಲ. ಬಳಿಕ ಆರೋಪಿ ಬ್ರಹ್ಮ ಹರಿಕಾಂತ್ ಕಳೆದ ಮೇ 1ರಂದು ರಾತ್ರಿ ಸೊಸೆ ಒಂಟಿಯಾಗಿ ಕೋಣೆಯಲ್ಲಿದ್ದುದನ್ನು ಅರಿತುಕೊಂಡಿದ್ದಾನೆ. ನಂತರ ರೂಮಿಗೆ ನುಗ್ಗಿ ಮೃತ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಘಟನೆ ನಂತರ ಮನೆಯವರಿಗೆ ವಿಷಯ ತಿಳಿಸಿ ಪತಿ ಶಿವು ಜೊತೆಯಲ್ಲಿ ಹಿಲ್ಲೂರಿನಲ್ಲಿರುವ ತನ್ನ ತವರು ಮನೆಗೆ ಹಿಂದಿರುಗಿ ಪೋಷಕರೊಂದಿಗೆ ಉಳಿದುಕೊಂಡಿದ್ದಳು.

ಸಂತ್ರಸ್ತೆ ನಡೆದ ಘಟನೆಯಿಂದಾಗಿ ತೀವ್ರ ಆಘಾತಕ್ಕೊಳಗಾಗಿ ಗುರುವಾರ ಹಿಲ್ಲೂರಿನ ಅರಣ್ಯ ಪ್ರದೇಶಕ್ಕೆ ತೆರಳಿ ದುಪ್ಪಟ್ಟಾದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಮುನ್ನ ಮಾವ ತನ್ನ ಮೇಲೆ ಅತ್ಯಾಚಾರ ಎಸಗಿರುವ ಕುರಿತು ಡೆತ್ ನೋಟ್ ನಲ್ಲಿ ವಿವರವಾಗಿ ಬರೆದಿಟ್ಟಿದ್ದಾಳೆ. ಬಳಿಕ ಈ ವಿಷಯ ಬೆಳಕಿಗೆ ಬಂದಿದೆ.

ವಿಷಯ ತಿಳಿದ ಅಂಕೋಲಾ ಪಿ.ಎಸ್.ಐ ಶ್ರೀಧರ್ ನೇತೃತ್ವದ ತಂಡ ಮೀನುಗಾರಿಕೆಗೆ ಮಲ್ಪೆಗೆ ತೆರಳಿದ್ದ ಆರೋಪಿ ಬ್ರಹ್ಮನನ್ನು ಬಂಧಿಸಿದ್ದಾರೆ. ಬ್ರಹ್ಮ ಮೂಲತಃ ತಮಿಳುನಾಡಿನವನಾಗಿದ್ದು, ಹಲವು ವರ್ಷಗಳ ಹಿಂದೆ ಅಂಕೋಲಾಕ್ಕೆ ಕೆಲಸವನ್ನು ಅರಸಿ ಬಂದಿದ್ದನು. ಬಳಿಕ ಹಿರೇಗುತ್ತಿಯ ಮಹಿಳೆಯನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದ್ದನು. ಪೊಲೀಸರು ಬಂಧಿಸಿದ ನಂತರ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈಗ ಪೋಲೀಸರ ಅಥಿತಿಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *