ಕಾಂಗ್ರೆಸ್‍ನ 20-30 ಶಾಸಕರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ: ಹೆಚ್‍ಡಿಕೆ ಬಾಂಬ್

Public TV
2 Min Read

ಬೆಂಗಳೂರು: ಕಾಂಗ್ರೆಸ್ (Congress) ಪಕ್ಷವನ್ನು 20-30 ಜನ ಶಾಸಕರು ಬಿಟ್ಟು ಹೋಗಲು ಸಿದ್ಧರಾಗಿದ್ದಾರೆ. ಇದನ್ನ ಕಂಟ್ರೋಲ್ ಮಾಡಲು ಕಾಂಗ್ರೆಸ್ ಅವರು ಘರ್ ವಾಪಸಿ ಅಂತ ಶುರು ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್‍ನಿಂದ ಅಪರೇಷನ್ ಹಸ್ತದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ತಿಳುವಳಿಕೆಯಲ್ಲಿ ನಮ್ಮ ಪಕ್ಷದ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಈ ವಿಷಯವನ್ನ ಬಿಟ್ಟಿದ್ದಾರೆ. ಕಾಂಗ್ರೆಸ್‍ನಲ್ಲೆ 20-30 ಜನ ಶಾಸಕರು ಪಕ್ಷ ಬಿಡುವ ಸ್ಥಿತಿಯಲ್ಲಿ ಇದ್ದಾರೆ. ಇಂತಹ ವಾತಾವರಣವನ್ನ ಕಾಂಗ್ರೆಸ್ ಎರಡು ತಿಂಗಳಲ್ಲಿ ಸೃಷ್ಟಿ ಮಾಡಿಕೊಂಡಿದ್ದಾರೆ. 30 ಜನ ಶಾಸಕರು ಪಕ್ಷ ಬಿಟ್ಟು ಹೋಗೋದನ್ನ ಮುಚ್ಚಿಕೊಳ್ಳೋದಕ್ಕಾಗಿ ಬಿಜೆಪಿ, ಜೆಡಿಎಸ್ ನಿಂದ 20 ಜನ, 10 ಜನ ಸಂಪರ್ಕದಲ್ಲಿ ಇದ್ದಾರೆ ಅಂತ ಹೇಳ್ತಿದ್ದಾರೆ ಎಂದರು. ಕಾಂಗ್ರೆಸ್ ನಿಂದ ಹೊರಗೆ ಬರೋಕೆ ರೆಡಿ ಇರೋ ಶಾಸಕರನ್ನ ಕಂಟ್ರೋಲ್ ಮಾಡೋಕೆ ಘರ್ ವಾಪಸಿ ಅಂತಿದ್ದಾರೆ ಅಂತ ಕಿಡಿಕಾರಿದರು.

ಕಾಂಗ್ರೆಸ್‍ನಲ್ಲಿ ಸೋಮವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ (Yeshwanthpur Vidhanasabha Constituency) ಹಲವರನ್ನ ಪಕ್ಷಕ್ಕೆ ವಾಪಸ್ ಕರೆಸಿಕೊಂಡಿದ್ದಾರೆ. ಶಾಸಕರು ಬಿಜೆಪಿಯಲ್ಲಿ ಇರುತ್ತೇನೆ ಅಂತ ಹೇಳ್ತಿದ್ದಾರೆ 3 ವರ್ಷ ಸಚಿವರಾಗಿ ಬಿಜೆಪಿ (BJP) ಅವರು ಸೋಮಶೇಖರ್ ಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದರು. ಬಿಜೆಪಿ (BJP) ನಾಯಕರು ಇವರು ಕೇಳಿದ್ದಕ್ಕೆ ಸಹಿ ಹಾಕುತ್ತಿದ್ದರು. ಮೈಸೂರು ಉಸ್ತುವಾರಿ ಕೊಟ್ಟಿದ್ರು. ಮಂತ್ರಿಯಾಗಿದ್ದಾಗ ನೀವು ಕೇಳಿದ್ದಕ್ಕೆ ಸಹಿ ಹಾಕುತ್ತಿದ್ದರು. ಮೈತ್ರಿ ಸರ್ಕಾರಕ್ಕೆ ಅಭಿವೃದ್ಧಿ ಆಗ್ತಿಲ್ಲ ಅಂತ ಹೋಗಿದ್ದು ಅಲ್ಲವಾ? 3 ವರ್ಷದಲ್ಲಿ ಮಂತ್ರಿಯಾಗಿ ಯಶವಂತಪುರದ ಅಭಿವೃದ್ಧಿಗೆ ಕೆಲಸ ಮಾಡಿಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ನನ್ನ ಸಾವನ್ನ ಎದುರಿಸಲು ಪತ್ನಿಯನ್ನು ಸಿದ್ಧಗೊಳಿಸಿದ್ದೇನೆ- ಪೊಸಾನಿ ಕೃಷ್ಣ ಮುರಳಿ

ಈಗ ಸಿಎಂ ಭೇಟಿ ಮಾಡಿ ಅಭಿವೃದ್ಧಿ ವಿಷಯದಲ್ಲಿ ಮನವಿ ಕೊಡೋಕೆ ಹೋಗಿದ್ದು ಅಂತೀರಾ. ಮತ್ತೆ 3 ವರ್ಷ ಮಾಡಿದ್ದು ಏನು ನೀವು? ಇವೆಲ್ಲ ಭೇಟಿ ಮಾಡೋಕೆ ಕಾರಣಗಳು ಅಷ್ಟೆ ಅಂತ ಸೋಮಶೇಖರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್