Odisha | ಪುರಿ ಜಗನ್ನಾಥ ದೇವಾಲಯಕ್ಕೆ ತೆರಳುತ್ತಿದ್ದ ಬೆಂಗಳೂರಿನ 20 ಯಾತ್ರಿಕರು ಅಸ್ವಸ್ಥ

Public TV
1 Min Read

– 10 ಮಂದಿಯ ಸ್ಥಿತಿ ಗಂಭೀರ

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ (Puri Jagannath Temple) ತೆರಳುತ್ತಿದ್ದ ಬೆಂಗಳೂರಿನ 20 ಯಾತ್ರಿಕರು (Bengaluru Pilgrims) ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ ಯಾತ್ರಿಕರ ತಂಡವೊಂದು ಏ.26ರಂದು 24 ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡಿದ್ದರು. ಬುಧವಾರ ಉತ್ತರ ಪ್ರದೇಶದ ಅಯೋಧ್ಯೆ ಹಾಗೂ ಕಾಶಿಗೆ ಭೇಟಿ ನೀಡಿದ ಯಾತ್ರಿಕರು ತಾವೇ ತಯಾರಿಸಿದ ಅನ್ನ ಸಾಂಬಾರ್‌ ತಿಂದು ಗುರುವಾರ ಮುಂಜಾನೆ ಒಡಿಶಾದ ಪುರಿ ಜಗನ್ನಾಥನ ಸನ್ನಿಧಿಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಅತಿಸಾರ (Diarrhea) ಹಾಗೂ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆ ಅಸ್ವಸ್ಥ ಯಾತ್ರಿಕರನ್ನು ಬಾಲಾಸೋರ್ (Balasore) ಜಿಲ್ಲೆಯ ಸೊರೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡ 20 ಮಂದಿಯ ಪೈಕಿ 10 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ತಮಿಳುನಾಡು ಮಸೂದೆಗಳ ವಿಚಾರದಲ್ಲಿ ಗಡುವು – ರಾಷ್ಟ್ರಪತಿಗಳಿಂದ ಸುಪ್ರೀಂಗೆ 14 ಪ್ರಶ್ನೆ

ಬಿಸಿಗಾಳಿ ಹಾಗೂ ಬಿಸಿಲಿನ ತಾಪದಿಂದ ಯಾತ್ರಿಕರಲ್ಲಿ ಅತಿಸಾರ ಹಾಗೂ ವಾಂತಿ ಕಾಣಿಸಿಕೊಂಡು ಅಸ್ವಸ್ಥಗೊಂಡಿರುವ ಸಾಧ್ಯತೆಯಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಹುಟ್ಟುಹಬ್ಬ – ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್

Share This Article