ಚಾಮರಾಜನಗರ: ಹುಲಿಗಳ ಸಾವು ಮಾಸುವ ಮುನ್ನವೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamarajanagara) ಮತ್ತೊಂದು ಮನಕಲಕುವ ಘಟನೆ ನಡೆದಿದೆ. 20 ಕ್ಕೂ ಕೋತಿಗಳು ಶವವಾಗಿ ಪತ್ತೆಯಾಗಿವೆ.
ಕೋತಿಗಳಿಗೆ ವಿಷಪ್ರಾಶನ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲು ಕೋತಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೊಡೊಯ್ದಿದ್ದಾರೆ. ಘಟನೆ ಎಸಗಿರುವವರ ವಿರುದ್ಧ ಕಂದೇಗಾಲ ಗ್ರಾಮಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೈ ಕೊಟ್ಟ ಪ್ರೀತಿಸಿದ ಹುಡುಗಿ – ಮನನೊಂದು ಯುವಕ ನೇಣಿಗೆ ಶರಣು
ಮಲೆ ಮಹದೇಶ್ವರ ಅರಣ್ಯ ಪ್ರದೇಶದ ಹೂಗ್ಯಂನಲ್ಲಿ 5 ಹುಲಿಗಳು ವಿಷಪ್ರಾಶಾನದಿಂದ ಮೃತಪಟ್ಟಿದ್ದವು. ಹುಲಿಗಳ ಸಾವಿಗೆ ಖಂಡನೆ ವ್ಯಕ್ತವಾಗಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಪ್ರಕರಣದ ತನಿಖೆ ನಡೆಯುತ್ತಿದೆ.