ಜೂಜಾಡುತ್ತಿದ್ದ ಎಎಸ್‌ಐ, ಕಾನ್‌ಸ್ಟೇಬಲ್, ತಹಸೀಲ್ದಾರ್ ಚಾಲಕ ಸೇರಿದಂತೆ 20 ಮಂದಿ ಅರೆಸ್ಟ್

Public TV
1 Min Read

ಚಾಮರಾಜನಗರ: ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ, ಕ್ಲಬ್ ನಡೆಸುತ್ತಿದ್ದ ತಹಸೀಲ್ದಾರ್ ಚಾಲಕ ಸೇರಿದಂತೆ 20 ಮಂದಿಯನ್ನು ಬಂಧಿಸಿರುವ ಘಟನೆ ನಗರಸ ಕರಿನಂಜನಪುರ ಬಳಿ ನಡೆದಿದೆ.

ಮೀಸಲು ಪಡೆಯ ಎಎಸ್‌ಐ ಪ್ರದೀಪ್, ಹೆಡ್ ಕಾನ್‌ಸ್ಟೇಬಲ್ ಮರಿಸ್ವಾಮಿ, ಚಾಮರಾಜನಗರ ತಹಸೀಲ್ದಾರ್ ಚಾಲಕ ಕಮಲೇಶ್ ಸೇರಿದಂತೆ 20 ಮಂದಿಯನ್ನು ಜಿಲ್ಲಾ ಪೊಲೀಸ್ ವಿಶೇಷ ತಂಡ ಬಂಧಿಸಿ, 29 ಸಾವಿರ ರೂ.ವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MONEY

7 ಮಂದಿ ಭಕ್ತರ ಬಂಧನ: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜೂಜಾಡುತ್ತಿದ್ದ 7 ಮಂದಿ ಭಕ್ತರನ್ನು ಮಲೆಮಹದೇಶ್ವರ ಬೆಟ್ಟ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ತಲಕಾಡು ಗ್ರಾಮದ ಶಿವಾನಂದಸ್ವಾಮಿ, ನಾಗೇಂದ್ರ ಕುಮಾರ್, ವಿಜಯ್, ಮಹದೇವಪ್ಪ, ಬಸವರಾಜು ಕೃಷ್ಣ, ಸಂತೋಷ್ ಕುಮಾರ್ ಬಂಧಿತ ಆರೋಪಿಗಳು. ಇದನ್ನೂ ಓದಿ: ಪೊಲೀಸರು ಲಂಚ ಪಡೆದರೆ ಕೆಲ್ಸ ಆಗುತ್ತೆ, ಬೇರೆಯವರು ಹಣ ಪಡೆದ್ರೂ ಏನೂ ಮಾಡಲ್ಲ: ಪೊಲೀಸ್

POLICE JEEP

ಮಲೆ ಮಹದೇಶ್ವರ ಬೆಟ್ಟದ ಸಾಲೂರು ಸ್ಮಾರಕ ಭವನದ ಹಿಂಭಾಗ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಪೊಲೀಸರು ದಾಳಿ ನಡೆಸಿ ಜೂಜಾಡುತ್ತಿದ್ದ 7 ಜನರನ್ನು ಬಂಧಿಸಿ ಪಣಕ್ಕಿಟ್ಟಿದ್ದ 26,750 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮೇಘನಾ ಮನೆಯಲ್ಲಿ ಕ್ರಿಸ್‍ಮಸ್‍ಗೆ ಭರ್ಜರಿ ತಯಾರಿ – ಕಲರ್ ಫುಲ್ ಲೈಟಿಂಗ್ಸ್ ನೋಡಿ ರಾಯನ್ ಖುಷ್

Share This Article
Leave a Comment

Leave a Reply

Your email address will not be published. Required fields are marked *