ಶಿರಸಿಯಲ್ಲಿ ಭಾರೀ ಮಳೆಗೆ ಕೊಚ್ಚಿಹೋದ ಅಡಿಕೆ – 20 ಎಕರೆಗೂ ಹೆಚ್ಚು ಅಡಿಕೆ ತೋಟಕ್ಕೆ ಹಾನಿ

Public TV
1 Min Read

ಕಾರವಾರ: ಶಿರಸಿಯಲ್ಲಿ (Shirsi) ನಿನ್ನೆ ಸುರಿದ ಭಾರಿ ಮಳೆಗೆ ಹಲವು ಭಾಗದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಶಿರಸಿ ತಾಲೂಕಿನ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣಗೇರಿಯಲ್ಲಿ ಉಪೇಂದ್ರ ಹೆಗಡೆ ಎಂಬವರಿಗೆ ಸೇರಿದ ಅಡಿಕೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಅಡಿಕೆ ಸುಗ್ಗಿ ನಡೆಸಿ ಕೆಂಪಡಿಕೆಯನ್ನು ಮನೆ ಮುಂದೆ ಒಣಗಿಸಲು ಹಾಕಿದ್ದರು. ಮಳೆ ಅಬ್ಬರಕ್ಕೆ ಲಕ್ಷಾಂತರ ರೂ. ಮೌಲ್ಯದ ಅಡಿಕೆ ನೀರು ಪಾಲಾಗಿದೆ. ಮಳೆಯಿಂದ ಸುಮಾರು 20 ಎಕರೆಗೂ ಹೆಚ್ಚು ಅಡಿಕೆ ತೋಟ ಹಾನಿಯಾಗಿದ್ದು, ಭತ್ತದ ಬೆಳೆಗಳು ಸಹ ಮಳೆಗೆ ಹಾನಿಯಾಗಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಭೂಕಂಪನ: ಜೋರು ಶಬ್ದಕ್ಕೆ ಹೆದರಿ ಮನೆಯಿಂದಾಚೆ ಓಡಿ ಬಂದ ಜನ!

ಶಿರಸಿಯಲ್ಲಿ ನಿನ್ನೆ ಸಂಜೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಲಂಡಕನಹಳ್ಳಿ, ನರೇಬೈಲಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನರೇಬೈಲಿನ ಕಿರು ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ.

ಈ ಭಾಗದ ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗಿದೆ. ಇದನ್ನೂ ಓದಿ: ಬೆಂಗಳೂರು ಮಳೆಯ ಸಮಸ್ಯೆಗೆ ಪರಿಹಾರ ಕೊಡದ ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ: ಸುರೇಶ್ ಬಾಬು

Share This Article