20 ವರ್ಷಗಳ ಸುಂದರ ನೆನಪಿಗಾಗಿ 1,45,428 ರೂ. ಟಿಪ್ಸ್ ಕೊಟ್ಟ ದಂಪತಿ!

Public TV
1 Min Read

– ಸೋಶಿಯಲ್ ಮೀಡಿಯಾದಲ್ಲಿ ಬಿಲ್ ವೈರಲ್

ಚಿಕಾಗೋ: ಹಳೆಯ ನೆನಪನ್ನು ಮೆಲುಕು ಹಾಕಿದ ದಂಪತಿ ಈ ದಿನದ ನೆನಪು ಉಳಿಯಬೇಕು ಎಂದು ಹೋಟೆಲ್ ಸಿಬ್ಬಂದಿಗೆ 1,45,428 ರೂಪಾಯಿ ಟಿಪ್ಸ್ ನೀಡುವ ಮೂಲಕವಾಗಿ ಧನ್ಯವಾದ ಹೇಳಿದ್ದಾರೆ.

ದಂಪತಿ ಟಿಪ್ಸ್ ನೀಡಿರುವ ರಶೀದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ದಂಪತಿ ಟಿಪ್ಸ್ ನೀಡಿರುವ ಹಿಂದೆ ಒಂದು ಪ್ರೇಮ ಕಥೆ ಇದೆ ಎಂಬುದು ತಿಳಿದು ಬಂದಿದೆ.

20 ವರ್ಷಗಳ ಹಿಂದೆ ಇದೇ ರೆಸ್ಟೋರೆಂಟ್‍ನಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಬಳಿಕ ಇವರಿಬ್ಬರು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಹೀಗೆ ತಮ್ಮ ಹೊಸ ಜೀವನ ಶುರುವಾಗಲು 20 ವರ್ಷಗಳ ಹಿಂದೆ ಕಾರಣವಾಗಿದ್ದ ಇದೇ ರೆಸ್ಟೋರೆಂಟ್‍ಗೆ ಬಂದ ದಂಪತಿ, ಸಿಬ್ಬಂದಿಗೆ ಈ ಕೊಡುಗೆ ಕೊಟ್ಟಿದ್ದಾರೆ. ತಮ್ಮಿಬ್ಬರ ಭೇಟಿಯ 20 ವರ್ಷಗಳ ಖುಷಿಯನ್ನು ಸ್ಮರಣೀಯವನ್ನಾಗಿಸಲು ಈ ಟಿಪ್ಸ್ ಕೊಟ್ಟಿದ್ದಾರೆ. 20 ವರ್ಷಗಳ ಹಿಂದೆ ಫೆಬ್ರವರಿ 12ರಂದು ಇವರು ಇದೇ ರೆಸ್ಟೋರೆಂಟಿಗೆ ಜೊತೆಯಾಗಿ ಬಂದಿದ್ದರು.

WOW! WOW! WOW! WOW!????????????

This guest had his first date with his now wife 20 years ago at Club Lucky on February 12. He…

Posted by Club Lucky on Sunday, 14 February 2021

 

ಚಿಕಾಗೋ ಮೂಲದ ಕ್ಲಬ್ ಲಕ್ಕಿ ಎಂಬ ರೆಸ್ಟೋರೆಂಟ್‍ಗೆ ಬಂದ ದಂಪತಿ ಇಲ್ಲಿನ ಸಿಬ್ಬಂದಿಗಾಗಿ 2000 ಯುಎಸ್ ಡಾಲರ್ ಎಂದರೆ ಭಾರತದ 1,45,428 ರೂಪಾಯಿಯನ್ನು ನೀಡಿದ್ದಾರೆ. ಈ ಬಿಲ್ ಅನ್ನು ರೆಸ್ಟೋರೆಂಟ್ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. 20 ವರ್ಷಗಳ ಸುಂದರವಾದ ನೆನಪಿಗೆ ಹಾಗೂ ಉತ್ತಮ ಆಹಾರ ಮತ್ತು ಸಾಟಿ ಇಲ್ಲದ ಸೇವೆಗೆ ಧನ್ಯವಾದ ಎಂದು ಬಿಲ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *