ತೆಂಗಿನಕಾಯಿ ಫ್ಯಾಕ್ಟರಿ ನೀರಿನ ಗುಂಡಿಗೆ ಬಿದ್ದು 2 ವರ್ಷದ ಮಗು ದುರ್ಮರಣ

Public TV
1 Min Read

ತುಮಕೂರು: ತೆಂಗಿನಕಾಯಿ ಫ್ಯಾಕ್ಟರಿಯಲ್ಲಿ (Coconut Factory) ತೆಂಗಿನಕಾಯಿಯ ನೀರಿನ ತ್ಯಾಜ್ಯ ಸಂಗ್ರಹವಾಗುವ ಗುಂಡಿಯಲ್ಲಿ ಮಗುವೊಂದು ಬಿದ್ದು ಸಾವನಪ್ಪಿದ ಘಟನೆ ತುಮಕೂರು (Tumakuru) ಜಿಲ್ಲೆ ತಿಪಟೂರು (Tiptur) ತಾಲೂಕಿನ ಮೀಸೆತಿಮ್ಮನಹಳ್ಳಿ ಬಳಿ ಇರುವ ಮಾನ್ಯಶ್ರೀ ಕೋಕನೆಟ್ ಫ್ಯಾಕ್ಟರಿಯಲ್ಲಿ ನಡೆದಿದೆ.

ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಎರಡು ವರ್ಷದ ಹೆಣ್ಣು ಮಗು ಕಾರ್ಖಾನೆಯ ಗುಂಡಿಗೆ ಬಿದ್ದು ಮೃತಪಟ್ಟಿದೆ. ಬಿಹಾರ ಮೂಲದ ತಂದೆ ಹರೀಂದ್ರಕುಮಾರ್ ಮತ್ತು ತಾಯಿ ರೀನಾದೇವಿ ಪುತ್ರಿ ಕುಸುಮ ಕುಮಾರಿ (2) ಸಾವನ್ನಪ್ಪಿರುವ ದುರ್ದೈವಿ. ಇದನ್ನೂ ಓದಿ:  Saif Ali Khan Stabbed| ಮನೆಯ ಕೆಲಸದಾಕೆಯ ಜೊತೆ ದಾಳಿಕೋರನಿಗೆ ಇತ್ತಾ ಸಂಬಂಧ?

ಬುಧವಾರ 2 ಗಂಟೆ ಸುಮಾರಿಗೆ ಆಟವಾಡುತ್ತಿದ್ದ ಮಗು ಕಾಣದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದ ಸಂದರ್ಭ ಗುಂಡಿ ಒಳಗೆ ಬಿದ್ದಿರುವುದನ್ನು ಗಮನಿಸಿ ಮಗುವನ್ನು ಮೇಲೆ ಎತ್ತಲಾಗಿದೆ. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದೆ. ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ, ಹಲಾಲ್ ಕೋರ್ ಸಾಬಿ: ಪ್ರತಾಪ್ ಸಿಂಹ ಕಿಡಿ

ತೆಂಗಿನಕಾಯಿ ಪೌಡರ್ ಮಾಡುವ ಮೊದಲು ಸುಲಿದ ತೆಂಗಿನಕಾಯಿ ತೊಳೆದ ನೀರು, ಹಾಗೂ ಕಾಯಿಯೊಳಗಿನ ನೀರು ತ್ಯಾಜ್ಯದ ರೂಪದಲ್ಲಿ ಈ ಗುಂಡಿಯಲ್ಲಿ ಸಂಗ್ರಹವಾಗುತ್ತದೆ. ಅದೇ ಗುಂಡಿಯಲ್ಲಿ ಮಗು ಬಿದ್ದು ಮೃತಪಟ್ಟಿದೆ. ಘಟನೆ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೀದರ್‌ನಲ್ಲಿ ಫಿಲ್ಮಿ ಸ್ಟೈಲ್‌ ಎಟಿಎಂ ಹಣ ದರೋಡೆ – ಗನ್‌ಮ್ಯಾನ್‌ ಇಲ್ಲದೇ ಹಣ ತುಂಬಲು ಬಂದಿದ್ದ ಸಿಬ್ಬಂದಿ

Share This Article