ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ 2ರ ಬಾಲಕ ದಾಖಲೆ

Public TV
2 Min Read

ಬಾಗಲಕೋಟೆ: ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಬಾಗಲಕೋಟೆಯ 2ರ ಬಾಲಕ ದಾಖಲೆ ನಿರ್ಮಿಸಿದ್ದಾನೆ.

ಡಾ. ಗಾಯತ್ರಿ, ಡಾ. ಜೈಪ್ರಕಾಶ್ ದಂಪತಿ ಪುತ್ರನಾದ ಮೌರ್ಯವರ್ಧನ್ ಚದುರಂಗಕ್ಕೆ ಸಂಬಂಧಿಸಿದ ವಿಷಯದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದ್ದಾನೆ.

ಮೌರ್ಯವರ್ಧನ್ ತನ್ನ 2 ವರ್ಷ 26 ದಿನಗಳ ವಯಸ್ಸಿಗೆ ಚೆಸ್ ಬೋರ್ಡ್‍ನ ಮೇಲೆ ಎಲ್ಲಾ 32 ಚೆಸ್ ಕಾಯಿನ್‍ಗಳನ್ನು 1 ನಿಮಿಷ 47 ಸೆಕೆಂಡ್‍ಗಳಲ್ಲಿ ಸಮರ್ಪಕವಾಗಿ ಜೋಡಿಸಿದ್ದಾನೆ. ಇದರಿಂದಾಗಿ ಇವನು ಚೆಸ್ ಬೋರ್ಡ್‍ನ ಮೇಲೆ ಚೆಸ್ ಕಾಯಿನ್‍ಗಳನ್ನು ಸಮರ್ಪಕ ಹಾಗೂ ವೇಗವಾಗಿ ಜೋಡಿಸಿದ ಅತ್ಯಂತ ಕಿರಿಯ ವ್ಯಕ್ತಿ (Youngest to arrange chess pieces on a chess board) ಎಂಬುದಾಗಿ ದಿನಾಂಕ 8ಜೂನ್2021ಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್  ನಲ್ಲಿ ಹಾಗೂ ದಿನಾಂಕ 19ಜೂನ್2021ಕ್ಕೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದ್ದಾನೆ. ಇದನ್ನೂ ಓದಿ:  ಬಿಕಿನಿಯಲ್ಲಿ ಸಾರಾ ಅಲಿ ಖಾನ್ ಸಖತ್ ಹಾಟ್

ಈ ಮೂಲಕವಾಗಿ ತಮಿಳುನಾಡಿನ 2.6 ವ. ವಯಸ್ಸಿನ ಬಾಲಕನ ಹೆಸರಿನಲ್ಲಿದ್ದ ದಾಖಲೆ ಮುರಿದು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾನೆ. ಈ ಸಾಧನೆಯನ್ನು ಪರಿಗಣಿಸಿ ಇಂಡಿಯಾ ಹಾಗೂ ಏಷ್ಯಾ ಬುಕ್ ಆಫ್  ರೆಕಾರ್ಡ್ಸ್​ವತಿಯಿಂದ ಪದಕ, ಸರ್ಟಿಫಿಕೇಟ್, ಗುರುತಿನ ಕಾರ್ಡ್, ರೆಕಾರ್ಡ್ಸ್​ ಪುಸ್ತಕ ಹಾಗೂ ಇನ್ನಿತರ ವಸ್ತುಗಳನ್ನು ನೀಡಿ ಗೌರವಿಸಿದೆ. ಈ ಹಿಂದೆ ತನ್ನ 1 ವರ್ಷ 9 ತಿಂಗಳ ವಯಸ್ಸಿಗೆ 20 ವಿವಿಧ ಪ್ರಕಾರಗಳಲ್ಲಿ 594 ಚಿತ್ರಗಳನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ Kids Appreciation ವಿಭಾಗದಲ್ಲಿ ಸೇರ್ಪಡೆಗೊಂಡು ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಾಧನೆ ಮಾಡಿ ಖ್ಯಾತಿ ಹೊಂದಿದ್ದನು. ಇದನ್ನೂ ಓದಿ:  ಅರುಣ್ ಸಾಗರ್ ಮಗನ ಸಾಧನೆ ಕೊಂಡಾಡಿದ ಸುದೀಪ್

ಹೀಗೆ ತನ್ನ 2 ವರ್ಷ ವಯಸ್ಸಿಗೆ ಎರಡು ರಾಷ್ಟ್ರೀಯ ಮಟ್ಟದ ಹಾಗೂ ಒಂದು ಏಷ್ಯಾ ಮಟ್ಟದ ದಾಖಲೆ ನಿರ್ಮಿಸಿ ಬಾಲಕ ದೇಶಕ್ಕೆ ಕೀರ್ತಿಯನ್ನು ತಂದಿದ್ದಾನೆ. ಮೂಲತಃ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು, ಆಲೂರು ಗ್ರಾಮದವರಾದ ಇವನ ಕುಟುಂಬ ಉದ್ಯೋಗದ ನಿಮಿತ್ತ ಪ್ರಸ್ತುತ ಜಮಖಂಡಿಯ ಮೈಗೂರು ಕಾಲೋನಿಯ ತಾತ್ಕಾಲಿಕ ನಿವಾಸಿಗಳಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *