ಸೋದರಿಯರನ್ನ ಕೂಡಿ ಹಾಕಿ 2 ದಿನ ಮೂವರಿಂದ ನಿರಂತರ ಗ್ಯಾಂಗ್‍ರೇಪ್

Public TV
2 Min Read

ಅಗರ್ತಲಾ: 13 ವರ್ಷದ ಅಪ್ರಾಪ್ತೆ ಮತ್ತು ಆಕೆಯ ಸಹೋದರಿಯನ್ನು ಅಪಹರಿಸಿ ಎರಡು ದಿನಗಳ ಕಾಲ ಕೂಡಿ ಹಾಕಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ತ್ರಿಪುರಾದ ಉನಾಕೋಟಿ ಜಿಲ್ಲೆಯಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 34 ವರ್ಷದ ಆಟೋರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ. ಆಟೋ ಚಾಲಕ ಸೇರಿ ಮೂವರು ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮೂವರಲ್ಲಿ ಈತನೇ ಮುಖ್ಯ ಆರೋಪಿ ಎಂದು ತಿಳಿದುಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ:
ಸಂತ್ರಸ್ತ ಸಹೋದರಿಯರು ಮನೆಗೆ ಹೋಗಲು ಕೈಲಾಶಹಾರ್ ಪಟ್ಟಣದ ಸೇತುವೆ ಬಳಿ ವಾಹನಕ್ಕಾಗಿ ಕಾಯುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಆಟೋರಿಕ್ಷಾ ಬಂದಿದೆ. ಇಬ್ಬರು ಸಹೋದರಿಯರು ಆ ಆಟೋ ರಿಕ್ಷಾವನ್ನು ಹತ್ತಿದ್ದಾರೆ. ಆದರೆ ದಾರಿ ಮಧ್ಯೆ ಆಟೋ ಚಾಲಕ ಇಬ್ಬರು ಪುರುಷ ಪ್ರಯಾಣಿಕರನ್ನು ಆಟೋಗೆ ಹತ್ತಿಸಿಕೊಂಡಿದ್ದಾನೆ. ಆಟೋ ಚಾಲಕನು ಅವರನ್ನು ಮನೆಗೆ ಬಿಡುವ ಬದಲು ಇಬ್ಬರ ಜೊತೆ ಸೇರಿ ಅವರಿಗೆ ಟವೆಲ್ ಹೊದಿಸಿ ಖೌವಾ ಜಿಲ್ಲೆಯ ತೆಲಿಯಮುರಾ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಾರೆ ಅಂತ ಸಂತ್ರಸ್ತೆಯರು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇಬ್ಬರನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ನಿರಂತರವಾಗಿ ಮೂವರು ಕಾಮುಕರು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಎರಡು ದಿನಗಳ ನಂತರ ಸಂತ್ರಸ್ತೆಯರನ್ನು ಟೆಲಿಮೂರ ರೈಲು ನಿಲ್ದಾಣದಲ್ಲಿ ಬಳಿ ಬಿಟ್ಟಿದ್ದಾರೆ. ಅಲ್ಲಿ ಅವರು ಸರ್ಕಾರಿ ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ಸಂಪಾ ದಾಸ್ ತಿಳಿಸಿದ್ದಾರೆ.

ನಾವು ಸಂತ್ರಸ್ತೆಯರನ್ನು ನಮ್ಮ ವಶದಲ್ಲಿರಿಸಿಕೊಂಡು ಪೋಷಕರಿಗೆ ಮಾಹಿತಿ ತಿಳಿಸಿದ್ದೆವು. ಬಳಿಕ ಅವರು ಬಂದು ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಸಂತ್ರಸ್ತೆಯ ತಾಯಿ ಸಲ್ಲಿಸಿದ ದೂರಿನ ಆಧಾರದ ಮೇರೆಗೆ ಆಟೋರಿಕ್ಷಾ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ. ಇತರ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸ್ವಪನ್ ದೇಬ್ಬರ್ಮಾ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *